This is the title of the web page
This is the title of the web page
Crime NewsState News

ಮಗಳು ಮಾಡಿದ ತಪ್ಪು : ಮರ್ಯಾದೆಗೆ ಅಂಜಿ ರೈಲಿಗೆ ತಲೆಕೊಟ್ಟ ಪೋಷಕರು..?


K2kannadanews.in

Suicide News ರಾಯಚೂರು: ಪ್ರಿಯಕರನಿಗಾಗಿ (Lover) ಚಿನ್ನ ಕದ್ದ ಯುವತಿ (Women theft gold), ಇದೀಗ ಹೆತ್ತವರನ್ನೇ ಕಳೆದುಕೊಂಡು ಆಸ್ಪತ್ರೆ ಪಾಲಾಗಿದ್ದಾಳೆ. ಒಂದೇ ಕುಟುಂಬದ ಮೂವರು ರೈಲಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ತಂದೆ-ತಾಯಿ (Father-mother) ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮಗಳು ಗಂಭೀರ ಗಾಯಗೊಂಡಿದ್ದಾಳೆ.

 

ರಾಯಚೂರು (Raichur) ನಗರದ ಯರಮರಸ್ ‌ಹೊರವಲಯದಲ್ಲಿ ಘಟನೆ ನಡೆದಿದೆ. ಸಮೀರ್ ಅಹ್ಮದ್ (sameer ahamd 44), ಜುಲ್ಲಾಕಾ ಬೇಗಂ(jullak begam 40) ದಂಪತಿ ಮೃತ ದುರ್ದೈವಿಗಳು. ಗಂಭೀರ ಗಾಯಗೊಂಡಿದ್ದ ಮೆಹಾಮುನ್ (mehmun 21) ಎಂಬಾಕೆಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂದಹಾಗೇ 21 ವರ್ಷದ ಮೆಹಾಮುನ್‌ ಸರ್ಫರಾಜ್‌ (Srfaraz) ಎಂಬಾತನನ್ನು ಪ್ರೀತಿಸುತ್ತಿದ್ದಳು. ಅವನೊಂದಿಗೆ ಜೀವನ ಮಾಡಲು ಅಡ್ಡದಾರಿಯನ್ನು ಹಿಡಿದಿದ್ದೆ ಈ ಘಟನೆಗೆ ಕಾರಣವಾಗಿದೆ. ನಗರದಲ್ಲಿ ವಾಸವಿದ್ದ ಮಹಿಮ್ಮುದ್ ಹುಸೇನ್ ಎಂಬುವವರ ಮಗನಿಗೆ ಮೆಹಾಮುನ್‌ ಟ್ಯೂಷನ್ ಮಾಡುತ್ತಿದ್ದಳು.

ಅದೇ ಮನೆಯಲ್ಲಿ ಡೈಮಂಡ್ ನಕ್ಲೇಸ್ (Diamond necklace) ಹಾಗೂ ಚಿನ್ನವು (Gold) ಕಳ್ಳತನವಾಗಿತ್ತು. ಹೀಗಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಿಚಾರಣೆಗೆ ಬೆದರಿದ ಮೆಹಾಮುನ್‌ ಕದ್ದ ಚಿನ್ನವನ್ನು ಯಾರಿಗೂ ತಿಳಿಯದೇ ವಾಪಸ್‌ ಕಿಟಿಕಿ ಮೂಲಕ ಎಸೆದಿದ್ದಳು ಅದು ಸಿಸಿ ಟಿವಿಯಲ್ಲಿ (CCTV) ಸೆರೆಯಾಗಿತ್ತು. ಇದನ್ನು ವಿಚಾರಿಸಿದಾಗ ಕಳ್ಳತನ ಒಪ್ಪಿಕೊಂಡಿದ್ದಳು. ಕದ್ದ ಚಿನ್ನದಲ್ಲಿ ಒಂದು ಬ್ರೆಸ್ಲೈಟ್ (Bracelet) ಮಿಸ್ಸಿಂಗ್‌ ಆಗಿತ್ತು. ಅದನ್ನು ಪ್ರಿಯಕರನಿಗೆ ಕೊಟ್ಟಿದ್ದಳು. ಆದರೆ ಮಾಲಿಕರು ಎಲ್ಲಾ ಚಿನ್ನ ವಾಪಸ್ ಕೊಡುವಂತೆ ಟೈಂಲೈನ್ (Time line) ಕೊಟ್ಟಿದ್ದರು. ಇತ್ತ ಬಾಯ್‌ಫ್ರೆಂಡ್‌ ಕೊಟ್ಟ ಚಿನ್ನವನ್ನು ಕೇಳುತ್ತಿದ್ದಂತೆ ಆತನು ಫೋನ್‌ ಸ್ವಿಚ್ಡ್‌ ಆಫ್‌ (Phone switch off) ಮಾಡಿಕೊಂಡಿದ್ದ.

ಮಗಳ ಯಡವಟ್ಟಿನಿಂದ ಮರ್ಯಾದೆಗೆ ಹೆದರಿ ಮೂವರು ಆತ್ಮಹತ್ಯೆಗೆ (suicide) ನಿರ್ಧರಿಸಿ, ರೈಲಿಗೆ (Train) ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ತಂದೆ-ತಾಯಿ ಮೃತಪಟ್ಟರೆ, ಮಗಳು ಗಂಭೀರ ಗಾಯಗೊಂಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರೈಲ್ವೆ ಪೊಲೀಸರು (Railway police) ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಬ್ಬರ ಮೃತದೇಹಗಳನ್ನು ರಿಮ್ಸ್ ಆಸ್ಪತ್ರೆಗೆ (Rims hospital) ರವಾನಿಸಿದ್ದಾರೆ. ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.


[ays_poll id=3]