This is the title of the web page
This is the title of the web page
Crime NewsState News

ವೃದ್ಧನಿಗೆ ವಾಕಿಂಗ್ ಸ್ಟಿಕ್​​ ನಿಂದ ಹೊಡೆದು ದೌರ್ಜನ್ಯ : ಇದೆಂಥ ಕ್ರೌರ್ಯ..?


K2kannadanews.in

Assault On oldaeg : ಮನೆಗೆ ಸೊಸೆಯಾಗಿ ಬಂದವಳು ವೃದ್ಧ ಮಾವನ ಮೇಲೆ ದೌರ್ಜನ್ಯ ಮೆರೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ಷೀಣಾಕಾರಣಕ್ಕೆ ವಾಕಿಂಗ್ ಸ್ಟಿಕ್ ನಿಂದ ಹೊಡೆದ ಅಮಾನವೀಯ ಘಟನೆಯೊಂದು ಮಂಗಳೂರು ನಗರದಲ್ಲಿ ನಡೆದಿದೆ.

ಹೌದು ಶರ್ಟ್​ನ್ನು ಸೋಫಾ ಮೇಲೆ ಇಟ್ಟ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಕೆಂಡಮಂಡಲವಾಗಿದ ಪಾಪಿ ಸೊಸೆ‌. ಹೋಗಿ ಸಾಯಿ ಎಂದು ಹಲ್ಲೆ‌ ಮಾಡಿದ್ದಾರೆ. ಮಾರ್ಚ್ 9 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಉಮಾಶಂಕರಿ ಎಂಬುವವರಿಂದ ಹಲ್ಲೆ ಮಾಡಲಾಗಿದೆ. ಮಾವ ಪದ್ಮನಾಭ ಸುವರ್ಣ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ.

ಪತಿ ವಿದೇಶದಲ್ಲಿದ್ದು ಮನೆಯಲ್ಲಿ ಮಾವ ಅತ್ತೆ ಮಾತ್ರ ಇದ್ದರು. ಉಮಾಶಂಕರಿ ವಿರುದ್ಧ ವೃದ್ಧರ ಮಗಳು ಪ್ರಿಯಾ ಎಂಬುವವರಿಂದ ಕೊಲೆಯತ್ನ ದೂರು ದಾಖಲು ಮಾಡಲಾಗಿದೆ. ಸಿಸಿಟಿವಿ ಆಧರಿಸಿ ಪತಿ ಠಾಣೆಗೆ ದೂರು ನೀಡಿದ್ದು, ಕಂಕನಾಡಿ ಪೊಲೀಸರಿಂದ ಉಮಾಶಂಕರಿಯನ್ನು ಬಂಧಿಸಲಾಗಿದೆ.


[ays_poll id=3]