This is the title of the web page
This is the title of the web page
Politics NewsVideo News

ಎಣ್ಣೆ, ಬೀಡಿ, ಗುಟ್ಕಾ, 10 ಸಾವಿರ ಕ್ಯಾಷ ಜೊತೆ‌ ಮತದಾರಿಗೆ ಕೊಡ್ತಿದಾರಂತೆ ಕಾಂಡೋಮ್‌..!


K2kannadanews.in

Election News : ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಗಾಳಿ ಬೀಸತೊಡಗಿದೆ. ಆಗಲೇ ಅಲ್ಲಿನ ಪಕ್ಷಗಳು ಮತದಾರರನ್ನು ಸಳೆಯೋದಕ್ಕೆ ಆರಂಭಿಸಿವೆ. ಈ ಮಧ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. YSR Congress ಪಕ್ಷದಿಂದ ಗಿಫ್ಟ್ ನೀಡಲಾಗಿದೆ. ಮತದಾರರನ್ನು ಸೆಳೆಯಲು ವೈಆರ್‌ಎಸ್‌ ಉಪಯೋಗಿಸುತ್ತಿರುವ ತಂತ್ರ ಎಂದು ಟಿಡಿಪಿ ಆರೋಪಿಸಿದೆ.

ಈ ಉಡುಗೊರೆಯ ಪೆಟ್ಟಿಗೆಗೆ ಸಿದ್ದಂ ಎಂದು ಹೆಸರಿಡಲಾಗಿದ್ದು, ಕೆಳಗೆ ಜಗನ್‌ ಅಣ್ಣನ ಕಾಣಿಕೆ ಎಂದು ಬರೆಯಲಾಗಿದೆ. ಬಾಕ್ಸ್‌ ನಲ್ಲಿ ಹತ್ತು ಸಾವಿರ ರೂ. ನಗದು ಹಣ, ಮದ್ಯದ ಬಾಟಲಿ, ಕುರುಕು ತಿಂಡಿಯ ಪೊಟ್ಟಣಗಳು, ಬೀಡಿ ಕಟ್ಟು, ಇಸ್ಪೀಟ್‌ ಪ್ಯಾಕೆಟ್‌ ಜೊತೆಗೆ ಒಂದು ಕಾಂಡೊಮ್‌ ಪೊಟ್ಟಣವನ್ನೂ ಇರಿಸಲಾಗಿದೆ. ಅನ್‌ ಬಾಕ್ಸಿಂಗ್‌ ವಿಡಿಯೋಗಳು ಈಗಾಗಲೇ ಆಂದ್ರಪ್ರದೇಶದಲ್ಲಿ ವೈರಲ್‌ ಆಗಿದೆ. ಇದು ಮತದಾರರನ್ನು ಸೆಳೆಯಲು ವೈಆರ್‌ಎಸ್‌ ಉಪಯೋಗಿಸುತ್ತಿರುವ ತಂತ್ರ ಎಂದು ಟಿಡಿಪಿ ಆರೋಪಿಸಿದ್ದರೆ, ಟಿಡಿಪಿಯು ವೈಎಸ್‌ಆರ್‌ ಪಕ್ಷದ ಹೆಸರು ಕೆಡಿಸಲು ಈ ರೀತಿಯ ಸುದ್ದಿ ಹರಡುತ್ತಿದೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಕಿಡಿಕಾರಿದೆ.


[ays_poll id=3]