This is the title of the web page
This is the title of the web page
Crime NewsLocal News

ಬಾಲ್ಯವಿವಾಹ ತಡೆದ ಅಧಿಕಾರಿಗಳು : ಅಪ್ರಾಪ್ತೆ ಬಾಲ ಮಂದಿರಕ್ಕೆ ಶಿಫ್ಟ್..! Stop child marrege


K2kannadanews.in

child marriage ರಾಯಚೂರು : ಅಪ್ರಾಪ್ತ (minor) ಬಾಲಕಿಯ ಮದುವೆ (Marriage) ಮಾಡಲು ಮುಂದಾಗಿದ್ದ ವಿವಾಹ ತಡೆದು ಬಾಲಕಿಯನ್ನು ರಕ್ಷಿಸಿ (Save) ಬಾಲಂಮದಿರಕ್ಕೆ ಶಿಫ್ಟ್ (Shift) ಮಾಡಿದ ಘಟನೆ ಮೈಲಾರ ನಗರ ಬಡಾವಣೆಯಲ್ಲಿ ಜರುಗಿದೆ.

ರಾಯಚೂರು (Raichur) ನಗರದ ಮೈಲಾರ ನಗರ ಬಡಾವಣೆಯಲ್ಲಿ ಪೋಷಕರು (Parents) ಬಾಲಕಿಯ ಮದುವೆ ಮಾಡಲು ಮುಂದಾಗಿದ್ದಾಗ ಖಚಿತ ಮಾಹಿತಿ (information) ಪಡೆದ ಅಧಿಕಾರಿಗಳು (Officers) ದಾಳಿ ನಡೆಸಿ ಬಾಲ್ಯ ವಿವಾಹ ತಡೆದಿದ್ದಾರೆ. ವಿವಾಹಕ್ಕೆ ಪೋಷಕರು ಸಕಲ ತಯಾರಿ ನಡೆಸಿದ್ದರು. ಈ ಬಗ್ಗೆ ಸ್ಥಳೀಯರು ಮಕ್ಕಳ ಸಹಾಯವಾಣಿ (Child helpline) ಕೇಂದ್ರಕ್ಕೆ ಕರೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಂ.ಎನ್‌.ಚೇತನ್‌ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ತಂಡವು (Team) ಮದುವೆ ಮನೆಗೆ ತೆರಳಿದೆ. ಈ ವೇಳೆ, ಪಾಲಕರು ಹಾಗೂ ಸಂಬಂಧಿಕರು (Relative) ಅಧಿಕಾರಿಗಳ ವಿರುದ್ಧ ಕೂಗಾಡಿ ಆಕ್ಷೇಪ (Opposed) ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ನಿಯಮ ಪ್ರಕಾರ ಬಾಲ್ಯ ವಿವಾಹ ನಡೆಸುವುದು ಶಿಕ್ಷಾರ್ಹ ಅಪರಾಧ‌ ಎಂದು ಪೊಲೀಸ್‌ (Police) ನೆರವಿನೊಂದಿಗೆ ಪಾಲಕರ ಹಾಗೂ ಸಂಬಂಧಿಕರ ಮನವೊಲಿಸಿ ಬಾಲ್ಯ ವಿವಾಹ ತಡೆದು, ಬಾಲಕಿಯನ್ನು ಬಾಲಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ.


[ays_poll id=3]