
ಮಾನ್ವಿ : ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಗೊದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಅನ್ನಭಾಗ್ಯ ಯೋಜನೆಯ ಪಡಿತರ ಜೋಳದ ಸುಮಾರು 1,200 ಚೀಲಗಳನ್ನು ವಶಕ್ಕೆ ಪಡೆದ ಘಟನೆ ಪೋತ್ನಾಳ ಗ್ರಾಮದ ಹೊರವಲಯದಲ್ಲಿ ಜರುಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಜರುಗಿದ ದಾಳಿ ವೇಳೆ, ಗೋದಾಮಿನಲ್ಲಿ ಸುಮಾರು 2,300 ಕ್ವಿಂಟಾಲ್ ಜೋಳದ ಚೀಲಗಳು ಪತ್ತೆಯಾಗಿವೆ. ಇವುಗಳ ಪೈಕಿ 1,200 ಅನ್ನಭಾಗ್ಯದ ಚೀಲಗಳು ಕಂಡುಬಂದಿವೆ. ಗೋದಾಮು ಜಪ್ತಿ ಮಾಡಿರುವ ಅಧಿಕಾರಿಗಳು, ಗೋದಾಮಿನ ಹೊರಗಡೆ ನಿಲ್ಲಿಸಿದ್ದ ಜೋಳದ ಚೀಲಗಳನ್ನು ತುಂಬಿದ್ದ ಮೂರು ಲಾರಿಗಳನ್ನು ವಶಕ್ಕೆ ಪಡೆದಿದ್ದರೆ.
ಉಪವಿಭಾಗಾಧಿಕಾರಿ ಮಹಿಬೂಬಿ, ಅಕ್ರಮವಾಗಿ ಜೋಳ ಸಂಗ್ರಹ ಹಾಗೂ ಮಾರಾಟದ ಕುರಿತು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಆಹಾರ ಇಲಾಖೆಯ ಉಪನಿರ್ದೇಶಕ ಕೃಷ್ಣ ಮಾತನಾಡಿ, ಜಪ್ತಿ ಮಾಡಿರುವ ಅನ್ನಭಾಗ್ಯ ಯೋಜನೆಗೆ ಸೇರಿದ ಜೋಳ ಸೇರಿದಂತೆ ಅಕ್ರಮವಾಗಿ ಸಂಗ್ರಹಿಸಿರುವ ಎಲ್ಲಾ ದಾಸ್ತಾನು ಪರಿಶೀಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]