
ಲಿಂಗಸುಗೂರು : ಜ್ಞಾನ ದೇಗುಲ ಅಂತ ಕರೆಯುವ ಶಾಲೆಯ ಗೋಡೆಗಳಲ್ಲಿ, ಕಿಡಿಗೇಡಿಗಳು ಅಶ್ಲೀಲವಾಗಿ ಗೋಡೆ ಬರಹಗಳನ್ನು ಬರೆದಿದ್ದು, ವಿದ್ಯಾರ್ಥಿಗಳು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿವೆ ಕರಡಕಲ್ ಗ್ರಾಮದಲ್ಲಿನ ಗೋಡೆ ಬರಹಗಳು.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಅಶ್ಲೀಲ ಗೋಡೆ ಬರಹಗಳನ್ನು ಬರೆಯಲಾಗಿದೆ. ಕಿಡಿಗೇಡಿಗಳ ಈ ಕೃತ್ಯದಿಂದ ವಿದ್ಯಾರ್ಥಿಗಳು, ಶಿಕ್ಷಕರು ಪೋಷಕರು ಮುಜುಗರಕ್ಕೆ ಒಳಗಾಗುವಂತಾಗಿದೆ. ಶಾಲೆಯ ಗೊಡೆಗಳಿಗೆ ಅಶ್ಲೀಲ ಬರಹ ಹಾಗೂ ಚಿತ್ರಗಳನ್ನು ಬರೆದು ವಿರೂಪಗೊಳಿಸಿದ್ದಾರೆಂದು ಶಿಕ್ಷಕ ವರ್ಗ ಮತ್ತು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಇಂತಹ ಕೃತ್ಯ ಇದೆ ಮೊದಲಲ್ಲ, ಈ ಹಿಂದೆಯೂ ಬರೆದಾಗ ಅದನ್ನು ಅಳಿಸಲು ಸಾಧ್ಯವಾಗದೆ. ಅನಿವಾರ್ಯವಾಗಿ ಗೋಡೆಗೆ ಪೇಂಟ್ ಮಾಡಲಾಗಿತ್ತು ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]