
ರಾಯಚೂರು : ರಾಜ್ಯದಲ್ಲಿ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗಿದೆ. ಇದೀಗ ಲೋಕಸಭೆ ಚುನಾವಣೆಯ ಕಾವು ನಿಧಾನವಾಗಿ ಎರೆತೊಡಗಿದೆ. MPಗೇ ಮತ್ತ ಬತಿ೯ವಿ ಎನ್ನುವ ಈ ಒಂದು ಬೈಕ್ ನಂಬರ್ ಪ್ಲೇಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆ ಏನು ಅಂತ ಗೊತ್ತಾಗಬೇಕಾದರೆ ನೀವು ಈ ಸುದ್ದಿ ಓದಲೇಬೇಕು..
ರಾಯಚೂರು ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾದ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಸದ್ಯ ಲೋಕಸಭೆ ಟಿಕೆಟ್ ಪಡೆದು ಗೆಲುವು ಸಾಧಿಸಲು ಕಾತುರದಿಂದ ಕುಳಿತಿದ್ದಾರೆ. ಈ ನಡುವೆ ಕಾರ್ಯಕರ್ತರು ಸಹ MPಗೆ ಮತ್ತ ಬರ್ತಿವಿ ಅಂತ ಹೇಳಿ ಪ್ರಚಾರ ಶುರು ಮಾಡಿದ್ದಾರೆ. ಕಾರ್ಯಕರ್ತರು ತಮ್ಮ ವಿಚಿತ್ರ ವಾಹನಗಳ ನಂಬರ್ ಪ್ಲೇಟ್ ಗೆ ಈ ಒಂದು ಹೇಳಿಕೆ ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ಒಂದು ಹೇಳಿಕೆ ಯಾವ ಪಕ್ಷದ ಕಾರ್ಯಕರ್ತರು, ಯಾವ ನಾಯಕರ ಪರವಾಗಿ ಈ ಒಂದು ನೇಮ್ ಪ್ಲೇಟ್ ಹಾಕಿದ್ದಾರೆ ಅನ್ನೋದು ವಿಶೇಷ.
ಲೋಕಸಭಾ ಕ್ಷೇತ್ರದ ವಿಚಾರಕ್ಕೆ ಬಂದಾಗ ಬಿಜೆಪಿಯಲ್ಲಿ ಈ ಬಾರಿ ಸೋತ ಅಭ್ಯರ್ಥಿಗಳು ಪ್ರಬಲವಾಗಿ ತೆರೆಮರೆಯಲ್ಲಿ ಸೀಟಿಗಾಗಿ ಪೈಪೋಟಿ ನಡೆಸಿದ್ದಾರೆ. ಪ್ರಮುಖವಾಗಿ ಸುರಪುರ ಕ್ಷೇತ್ರದ ಮಾಜಿ ಶಾಸಕ ರಾಜುಗೌಡ, ದೇವದುರ್ಗ ಮಾಜಿ ಶಾಸಕ ಕೆ ಶಿವನಗೌಡ ನಾಯಕ, ಮಾನ್ವಿ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಬಿ ವಿ ನಾಯಕ ನಡುವೆ ಲೋಕಾ ಟಿಕೆಟ್ ಗಾಗಿ ಈಗಿನಿಂದಲೇ ನೇರ ಪೈಪೋಟಿ ಏರ್ಪಟ್ಟಿದೆ ಎಂಬ ಮಾತು ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಟಿಕೇಟ್ ಯಾರಿಗೆ ಸಿಗುತ್ತೋ ಗೊತ್ತಿಲ್ಲ, ಲೋಕಸಭೆಯ ಟಿಕೆಟ್ ಪಡೆದು ಗೆಲುವಿನ ನಗಾರಿ ಬಾರಿಸಬೇಕು ಎಂಬುದು ಈ ಮೂವರ ನಾಯಕರ ಶತಾಯಗತಾಯ ಪ್ರಯತ್ನ ಆಗಿದೆ.
ಈತ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಗಳು ಇಲ್ಲದಿದ್ದರೂ ಕೂಡ ಇಲ್ಲಿನ ಕಾರ್ಯಕರ್ತರು ಕೂಡ ತಮ್ಮ ಒಂದು ವಾಹನಗಳಿಗೆ ಇಂತಹದೇ ಒಂದು ನಾಮಫಲಕ ಹಾಕಿಕೊಂಡು ಓಡಾಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಬಿಜೆಪಿ ಪಕ್ಷದಲ್ಲಿ ಮೂರು ನಾಯಕರುಗಳ ಹೆಸರುಗಳು ಭಾರಿ ಸದ್ದು ಮಾಡುತ್ತಿವೆ. ಆದ್ರೆ ಯಾವ ಪಕ್ಷದಿಂದ ಕಣಕ್ಕಿಳಿದು ಶಕ್ತಿಪ್ರದರ್ಶನ ಮಾಡುತ್ತಾರೆ ಎಂಬುದೇ ಸದ್ಯಕ್ಕೆ ಕುತೂಹಲ. ಕಾರಣ ಮೂರು ಜನ ನಾಯಕರುಗಳು ಒಂದೇ ಸಮುದಾಯದ ನಾಯಕರಾಗಿದ್ದು ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ.
![]() |
![]() |
![]() |
![]() |
![]() |
[ays_poll id=3]