
ರಾಯಚೂರು : ಕಳೆದ ಎಂಟು ವರ್ಷಗಳಿಂದ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದರು ಕಿವಿಗೊಡದ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಮಹಾತ್ಮ ಗಾಂಧಿ ಅವರ ಪುತ್ತಳಿಗೆ ಮನಾರ್ಪಣೆ ಮಾಡುವ ನೈತಿಕತೆ ಇಲ್ಲ ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕದ ಜಿಲ್ಲಾಧ್ಯಕ್ಷೆ ಮೊಕ್ಷಮ್ಮ ಹೇಳಿದರು.
ಮದ್ಯನಿಷೇಧಕ್ಕೆ ಒತ್ತಾಯಿಸಿ ಅಕ್ಟೋಬರ್ 1 ರಂದು ರಾಜ್ಯಾದ್ಯಂತ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಅಹೋರಾತ್ರಿ ಧರಣಿಯನ್ನು ನಡೆಸುತ್ತೇವೆ. ಗಾಂಧಿ ಜಯಂತಿಯಂದು ಸರ್ಕಾರದ ಪ್ರತಿನಿಧಿಗಳು ಹಾರಹಾಕಿ ನಮಸ್ಕರಿಸುವುದಕ್ಕೆ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ. ಹೀಗಾಗಿ ನಾವು ಜನಪ್ರತಿನಿಧಿಗಳು ಹಾರ ಹಾಕುವುದನ್ನು ಪ್ರತಿಭಟಿಸಿ ಸರಕಾರಕ್ಕೆ ಈ ಪ್ರಸ್ತಾಪವನ್ನು ಹಿಂಪಡೆಯುವವರೆಗೆ ಗಾಂಧಿ ಪ್ರತಿಮೆ ಮುಟ್ಟುವ ಹಕ್ಕಿಲ್ಲವೆಂಬ ಬಿಸಿಮುಟ್ಟಿಸುತ್ತೇವೆ ಎಂದು ಎಚ್ಚರಿಸಿದರು.
ಆಂದೋಲನವು ಕಳೆದ 7 ವರ್ಷಗಳಿಂದ ರಾಜ್ಯಾದ್ಯಂತ ಮದ್ಯ ನಿಷೇಧವಾಗಬೇಕೆಂದು ಮಹಿಳೆಯರ ನೇತೃತ್ವದಲ್ಲಿ ವಿಭಿನ್ನರೀತಿಯ ಚಳುವಳಿಗಳನ್ನು ನಡೆಸಲಾಗುತ್ತಿದೆ. ಕಳೆದ 4 ವರ್ಷಗಳಿಂದ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಸರ್ಕಾರಗಳ ಮೇಲೆ ಒತ್ತಡ ಹೇರುತ್ತದೆ ಬಂದಿದ್ದೇವೆ. ಕರ್ನಾಟಕ ಉಚ್ಚನ್ಯಾಯಲಯಕ್ಕೆ ಮೊರೆಹೋಗಲಾಗಿ ಉಚ್ಚ ನ್ಯಾಯಾಲಯ ಸಹ ಅಕ್ರಮ ಮದ್ಯ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶವನ್ನು ನೀಡಿದೆ.ಆದರೂ ಕೂಡ ಆಡಳಿತ ಸರ್ಕಾರಗಳು ಆದಾಯದ ಮೂಲವನ್ನು ಹೆಚ್ಚಿಸುವುದನ್ನು ಮುಂದಿಟ್ಟುಕೊಂಡು ಮಹಿಳೆಯರ ಆಂದೋಲನಕ್ಕೆ ಅಗೌರವ ತೋರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
![]() |
![]() |
![]() |
![]() |
![]() |
[ays_poll id=3]