
ರಾಯಚೂರು : ಇನ್ನು ಮುಂದಿನ ದಿನಗಳಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಖಾಸಗಿ ಲೇಔಟ್ ಗಳು ಮಾಡಲು ಆದೇಶ ನೀಡುವುದಿಲ್ಲ, ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಗರ ಅಭಿವೃದ್ಧಿ ಇಲಾಖೆಯಿಂದ ಕಮ್ಮಿ ಎಂದರು 500 ಎಕರೆ ಜಾಗದಲ್ಲಿ ಸರ್ಕಾರಿ ಲೇಔಟ್ ನಿರ್ಮಾಣ ಮಾಡಲು ಸೂಚಿಸಿದ್ದೇನೆ ಎಂದು ನಾಗರ ಅಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಪ್ರತಿ ಜಿಲ್ಲೆಯಲ್ಲಿ ಸರ್ಕಾರದಿಂದ 500 ರಿಂದ 1000 ಎಕರೆ ಜಾಗದಲ್ಲಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್ ನಿರ್ಮಾಣ ಮಾಡಿ, ಬಡವರಿಗೆ ಮಧ್ಯಮ ವರ್ಗದವರಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನಗಳನ್ನು ನೀಡಲು ಈಗಾಗಲೇ ಸೂಚಿಸಿದ್ದೇನೆ. ಅದೇ ವಿಚಾರವಾಗಿ ಇಂದು ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಲು ಆಗಮಿಸಿದ್ದೇನೆ ಎಂದರು.
ಇನ್ನೂ ರಾಯಚೂರು ನಗರದಲ್ಲಿ ಖಾಸಗಿ ಲೇಔಟ್ ಗಳು ಮಿತಿಮೀರಿ ಹೋಗಿರುವೆ. ಹಾಗಾಗಿ ಬಡವರ ಕೈಗೆ ನಿವೇಶನಗಳು ಸಿಗುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ, ನಾನು ಸಚಿವನಾಗಿ 10 ದಿನಗಳಲ್ಲಿಯೇ ಇಲಾಖೆ ಸಭೆ ಕರೆದು, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಬಡವರಿಗೆ ನಿವೇಶನಗಳನ್ನು ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇನೆ. ಕೆಲ ದಿನಗಳಲ್ಲಿಯೇ ಬಡವರಿಗೆ ನಿವೇಶನ ಕೊಡಿಸುವ ವ್ಯವಸ್ಥೆ ಆಗುತ್ತದೆ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]