LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯಾವ ರೋಗಗಳನ್ನು ತಪ್ಪಿಸಬಹುದು..?

ಇತಿಹಾಸ ಪುರಾಣಗಳಲ್ಲಿ ಬೆಳ್ಳೊಳ್ಳಿ ಅಮೃತಾ ಅಂತ ಉಲ್ಲೇಖಿಸಲಾಗಿದೆ..

ವಿಶ್ವವಿದಲ್ಲಿ ಜನಪ್ರಿಯ ಸಂಬಾರ ವಸ್ತುವಿದು. ಬೆಳ್ಳುಳ್ಳಿಯ ಘಾಟುವಾಸನೆ, ಹೇರಳ ಔಷಧಿಯುಕ್ತ ಗುಣಗಳೇ ಇದನ್ನು ತುಂಬಾ ಎತ್ತರಕ್ಕೇರಿಸಿವೆ. ಇದು ಒಂದು ಆಂಟಿಬಯಾಟಿಕ್ ಮತ್ತು ಆಂಟಿಸೆಪ್ಟಿಕ್ ನಂತೆ ಕಾರ್ಯ ನಿರ್ವಹಿಸುವುದು. ಆಹಾರವನ್ನು ವಿಷಮಯಗೊಳಿಸುವ ಅನೇಕ ತೆರನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಬಲ್ಲುದು.

ಇದನ್ನು ಇತಿಹಾಸದಲ್ಲಿ ನೋಡಿದಾಗ ಗರುಡನು ಇಂದ್ರನ ಬಳಿಯಿಂದ ಅಮೃತವನ್ನು ಅಪಹರಿಸಿ ಕೊಂಡೊಯ್ಯುವಾಗ, ಭೂಮಿಗೆ ಬಿದ್ದ ಅಮೃತದ ಬಿಂದುಗಳು ಶ್ವೇತ ಕಂದಗಳಾಗಿ ಅರಳಿದವಂತೆ.. ಎನ್ನಲಾಗುತ್ತದೆ. ಬೆಳ್ಳುಳ್ಳಿಯ ಉಗಮದ ಕುರಿತು ಹಬ್ಬಿರುವ ಈ ಕಥೆ,ಎಷ್ಟು ಸ್ವಾರಸ್ಯಪೂರ್ಣ.. ಆದ್ರೆ ಇದು ಎಂತಹ ಸುಂದರ ಕಲ್ಪನೆ ಅಲ್ವಾ..!

*ಹಸಿ ಬೆಳ್ಳೊಳ್ಳಿ ತಿನ್ನುವುದರಿಂದ ಆಗುವ ಲಾಭಗಳು..: 

ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ, ಕಡಿಮೆಯಾಗಿ ರಕ್ತದೊತ್ತಡ ಮತ್ತು ಹೃದಯರೋಗಗಳಿಗೆ ಉತ್ತಮ ಪರಿಣಾಮ ನೀಡುತ್ತದೆ. ಗಂಟಲು ಉಸಿರಾಟದ ತೊಂದರೆ ಒಣಕೆಮ್ಮು, ದಮ್ಮು, ನೆಗಡಿ, ಶೀತ, ಕಫ ಮುಂತಾದ ಶ್ವಾಸನಾಳಗಳ ತೊಂದರೆಗಳು ನಿವಾರಿಸಲ್ಪಡುತ್ತವೆ. ಹಸಿವು ಮತ್ತು ಜೀರ್ಣಶಕ್ತಿಯನ್ನು ಉಂಟುಮಾಡುತ್ತದೆ. ಜಠರ ಮತ್ತು ಕರುಳಿನ ದೋಷಗಳು ವಾಯು ಪ್ರಕೋಪಗಳನ್ನು ನಿವಾರಿಸುತ್ತದೆ.

ಅಷ್ಟೇ ಅಲ್ಲ ಜ್ವರ, ಕಿವಿ ಮತ್ತು ಕಣ್ಣಿನ ತೊಂದರೆ, ವಾತ, ರಕ್ತದೋಷ, ಮೂತ್ರ ದೋಷಗಳಿಗೆ ಗುಣಕಾರಿ. ಇದು ಉತ್ತಮ ಸ್ಮರಣ ಶಕ್ತಿ ಪ್ರಚೋದಕವೂ ಹೌದು. ಕ್ಷಯ, ಕ್ಯಾನ್ಸರ್ ಚಿಕಿತ್ಸೆಗಳಿಗೂ ಬೆಳ್ಳುಳ್ಳಿ ಬಳಕೆಯಾಗುತ್ತಿದೆ.

ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಸಹಕಾರಿಯಾದ ಬೆಳ್ಳುಳ್ಳಿ ಆಯುರ್ವೇದದಲ್ಲಿ ಅಮೃತ ಸಮಾನವೆನಿಸಿದೆ. ಇದನ್ನು ದೀಪಕ, ಪಾಚಕ, ಬಲವರ್ಧಕ, ಧಾತು ವರ್ಧಕ, ಶುಕ್ರ ವರ್ಧಕ, ಕೇಶ ಮತ್ತು ಬುದ್ಧಿ ವರ್ಧಕವೆಂದು ಹೇಳಲಾಗಿದೆ. ನೋವು ನಿವಾರಕ ರೋಗನಿರೋಧಕ, ಕ್ರಿಮಿನಾಶಕ ಮತ್ತು ಶ್ವಾಸಹರವೆನಿಸಿದ ಬೆಳ್ಳುಳ್ಳಿ, ಮುರಿದ ಮೂಳೆಗಳನ್ನು ಜೋಡಿಸುವ ಸಾಮರ್ಥ್ಯ ಹೊಂದಿದೆ.

 

* ಬೆಳ್ಳುಳ್ಳಿಯ ದುರುಪಯೋಗ / ಅತಿಯಾದ ಸೇವನೆಯ ಸಮಸ್ಯೆಗಳು..:

ಅಮೃತ ಹೆಚ್ಚಾರೆ ವಿಶವಾಗುತ್ತರ ಎಂಬ ಮಾತಿನಂತೆ, ಹೆಚ್ಚು ತಿಂದರೆ ಅನಾಹುತಗಳು ಹೆಚ್ಚು. ಅತಿಯಾಗಿ ತಿಂದರೆ ಹೊಟ್ಟೆ ಉರಿ, ಗ್ಯಾಸ್, ಅಜೀರ್ಣ, ವಾಂತಿ ಉಂಟಾಗಬಹುದು.
ಕಚ್ಚಾ ಬೆಳ್ಳುಳ್ಳಿ ಹೆಚ್ಚು ಸೇವಿಸಿದರೆ ಕೆಲವರಿಗೆ ಹೊಟ್ಟೆ ನೋವು ಮತ್ತು ಬಾಯಿಯ ದುರ್ವಾಸನೆ ಕಾಣಬಹುದು. ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ರಕ್ತ ತೆಳುವಾಗುವ ಪರಿಣಾಮ ಹೆಚ್ಚಾಗಬಹುದು.

*ಯಾರು ಎಚ್ಚರಿಕೆಯಿಂದ ಸೇವಿಸಬೇಕು.?

ಅಮೃತಕ್ಕೆ ಸಮಾನವಾದ ಬೆಳ್ಳೊಳ್ಳಿ ಎಲ್ಲರಿಗೂ ಸಲ್ಲದು, ಕೆಲವರು ಇದರ ಬಗ್ಗೆ ಎಚ್ಚರಿಕೆ ಅಗತ್ಯ..
ರಕ್ತ ತೆಳುವಾಗಿಸುವ ಔಷಧಿ (blood thinners) ತೆಗೆದುಕೊಳ್ಳುವವರು. ಶಸ್ತ್ರಚಿಕಿತ್ಸೆ (ಆಪರೇಷನ್) ಆಗಲಿರುವವರು — ವೈದ್ಯರ ಸಲಹೆ ಪಡೆಯುವುದು ಅಗತ್ಯ. ಹೊಟ್ಟೆ ಹುಣ್ಣು, ತೀವ್ರ ಅಸಿಡಿಟಿ ಇರುವವರು. ಬೆಳ್ಳುಳ್ಳಿಗೆ ಅಲರ್ಜಿ ಇರುವವರು. ಗರ್ಭಿಣಿ ಮತ್ತು ಬಾಣಂತಿಯರು ಹೆಚ್ಚಿನ ಪ್ರಮಾಣದ ಬೆಳ್ಳುಳ್ಳಿ ಪೂರಕಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಬೇಕು.

ಹೇಗೆ ಸೇವಿಸುವುದು..?

ಸಾಮಾನ್ಯ ಆಹಾರದಲ್ಲಿ ಮಿತ ಪ್ರಮಾಣದ ಬೆಳ್ಳುಳ್ಳಿ ಹೆಚ್ಚಿನ ಆರೋಗ್ಯವಂತ ಜನರಿಗೆ ಸುರಕ್ಷಿತ. ಖಾಲಿ ಹೊಟ್ಟೆಯಲ್ಲಿ ಕಚ್ಚಾ ಬೆಳ್ಳುಳ್ಳಿ ತಿನ್ನುವುದು ಎಲ್ಲರಿಗೂ ಸೂಕ್ತವಲ್ಲ.

ಸೂಚನೆ ಮೇಲೆ ನೀಡಿರುವ ಮಾಹಿತಿ ಆರೋಗ್ಯದ ಹಿತದೃಷ್ಟಿಯಿಂದ. ಇದನ್ನು ಅಳವಡಿಸಿಕೊಳ್ಳುವವರು ಆಯುರ್ವೇದ ವೈದ್ಯರ/ ವೈದ್ಯರ ಸಲಹೆ ಪಡೆಯುವುದು ಅಗತ್ಯ..

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST