LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಿಂಗಸುಗೂರು ಅತ್ಯಾಚಾರ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ..

ಸಿಂಧನೂರು ನ್ಯಾಯಾಧೀಶರು ಶಿಕ್ಷೆ ನೀಡಿ, 1.05 ಲಕ್ಷ ದಂಡ ವಿಧಿಸಿದ್ದಾರೆ

ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹1.05 ಲಕ್ಷ ದಂಡ ವಿಧಿಸಿದೆ. ಹುನಕುಂಟಿ ಗ್ರಾಮದ ಕೆಂಚಪ್ಪ ಅಲಿಯಾಸ್ ನಾಗರಾಜ ತಂದೆ ನಾಗಲಿಂಗಪ್ಪ ಚೂಕ್ಕಾಡಿ ಎಂಬಾತ ಶಿಕ್ಷೆಗೆ ಗುರಿಯಾದ ಆರೋಪಿ.

ಬಾಧಿತ ಮಹಿಳೆ ಕಟ್ಟಿಗೆ ತರಲು ಹೊಲಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ದೂರಿನ ಆಧಾರದ ಮೇಲೆ ಲಿಂಗಸುಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ತನಿಖಾಧಿಕಾರಿ ಸತ್ಯನಾರಾಯಣರಾವ್ ಎಂ.ಜಿ. ಹಾಗೂ ಲಿಂಗಸುಗೂರು ಡಿವೈಎಸ್‌ಪಿ ದತ್ತಾತ್ರೇಯ ಡಿ.ಎಸ್. ಅವರ ನೇತೃತ್ವದಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ರಾಯಚೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಸಿಂಧನೂರು ಪೀಠದ ನ್ಯಾಯಾಧೀಶರಾದ ಎ. ಸೋಮಶೇಖರ ಅವರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಯನ್ನು ಅಪರಾಧಿ ಎಂದು ತೀರ್ಮಾನಿಸಿದ್ದಾರೆ. ಪರಿಶಿಷ್ಟ ಜಾತಿ/ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ಕಲಂಗಳು ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹1,05,000 ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ₹1 ಲಕ್ಷವನ್ನು ಬಾಧಿತಳಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಮಂಜುನಾಥ ಬೇರಿ ವಾದ ಮಂಡಿಸಿದ್ದು, ಪೊಲೀಸರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಿಂಗಸುಗೂರು ಅತ್ಯಾಚಾರ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ..ಲಿಂಗಸುಗೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕರ ಸಹೋದರ ನಡುವೆ ಹೊಡೆದಾಟಗೌರಂಪೇಟೆ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ ಎಂಬ ವದಂತಿ..ಭೀಕರ ಅಪಘಾತ: KKRTC ರಾಯಚೂರು ಡಿಪೊ ಬಸ್ ಹರಿದು ವ್ಯಕ್ತಿ ಸಾವುಬಂಗಿಕುಂಟಾ ರಸ್ತೆಯಲ್ಲಿ ಪೂಜಾ ಸಾಮಗ್ರಿ ಅಂಗಡಿಗೆ ಬೆಂಕಿ.‌.ಸಾರಿಗೆ ಬಸ್ ಡಿಕ್ಕಿ ಚಿಕಿತ್ಸೆ ಫಲಿಸದೆ ಬೈಕ್ ಸವಾರ ಯಾಸೀನ್ ಸಾವು..ಶಾಲೆ ಹೆಡ್‌ಮಾಸ್ಟರ್‌ಗೆ ತಿರುಗಿಬಿದ್ದ ವಿದ್ಯಾರ್ಥಿ ಕಾರಿನ ಮೇಲೆ ಕಲ್ಲು ಎಸೆಯಲು ಯತ್ನಬೈಕ್‌ಗಳ ಮೇಲೆ ಹರಿದ ಸರ್ಕಾರಿ ಸಾರಿಗೆ ಬಸ್ : ಸವಾರನ ಸ್ಥಿತಿ ಗಂಭೀರ..ಜಾಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕ ಸ್ಥಳದಲ್ಲೇ ಸಾವು..ಕಪಗಲ್ ಗ್ರಾಮದಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವು..