LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾಯ್ ಮುಝೇ ಏಕ್ ಪಿಸ್ತೂಲ್ ಚಾಹಿಯೇ ಥೀ, ಮಿಲೇಗಿ ಕ್ಯಾ..?

ರಾಯಚೂರಿನ ಯುವಕ ಅರೆಸ್ಟ್ ಯಾಕೆ ಗೊತ್ತಾ..?

 

ರಾಯಚೂರು : ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಹಾಗೂ ವಿವಾದಾತ್ಮಕ ಪೋಸ್ಟ್‌ಗಳಿಗೆ ಲೈಕ್, ಶೇರ್ ಮಾಡಿ ಸಮಾಜದಲ್ಲಿ ಅಸಮಧಾನ ಮೂಡಿಸಲು ಯತ್ನಿಸುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮಾಡಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.

ಹೌದು ಮೊಹಮ್ಮದ್ ಶಾಹಿಲ್(24) ಬಂಧಿತ ಯುವಕ. ಈತ ರಾಯಚೂರು ನಗರದಲ್ಲಿ ಟೀ ಸ್ಟಾಲ್ ಇಟ್ಟಿಕೊಂಡಿದ್ದ. ಇಷ್ಟಕ್ಕೆ ಸೀಮಿತವಾಗದ ಈತ ಸಾಮಾಜಿಕ ಜಾಲತಾಣದ ಗೀಳಿನಲ್ಲಿ ದೇಶ ದ್ರೋಹದ ಕೆಲಸಕ್ಕೆ ಮುಂದಾಗಿದ್ದ ಎನ್ನಲಾಗುತ್ತಿದೆ. ಭಾರತದಲ್ಲಿ ಗಲಭೆ ಎಬ್ಬಿಸಲು ಸ್ಕೆಚ್ ಹಾಕಿದ್ದ. ಅರಬ್ ಮೂಲದ ವ್ಯಕ್ತಿ ಈ ಸಂಬಂಧ ಶಾಹಿಲ್​ಗೆ ಮೈಂಡ್​​ವಾಷ್ ಮಾಡಿದ್ದ ಎಂದು ತಿಳಿದುಬಂದಿದೆ. ಇನ್​​ಸ್ಟಾಗ್ರಾಂನಲ್ಲಿ ರಾಣಾ ಭಾಯ್ ಹೆಸರಲ್ಲಿ ವಿದೇಶಿ ವ್ಯಕ್ತಿಯ ಜೊತೆಗೆ ಮೊಹಮ್ಮದ್ ಶಾಹಿಲ್ ಚಾಟಿಂಗ್​​ ಮಾಡುತ್ತಿದ್ದ.

ಚಾಟಿಂಗ್ ಮಾಡಿದ್ದಲ್ಲದೆ ರಾಣಾ ಭಾಯ್ ಅಕೌಂಟ್​ನ ಪೋಸ್ಟ್​ಗಳಿಗೆ ಲೈಕ್ ಮಾಡ್ತಿದ್ದ. ಕಮೆಂಟ್, ಶೇರ್ ಮಾಡುತ್ತ ಆತನ ಜೊತೆ ಸಂಪರ್ಕ ಸಾಧಿಸಿದ್ದ. ಅನಾಮಧೇಯ ವ್ಯಕ್ತಿಯ ಪೋಸ್ಟ್​ ನೋಡಿ ಪ್ರಭಾವಿತನಾಗಿದ್ದ ಶಾಹಿಲ್, ರಾಣಾ ಭಾಯ್​ಗೆ ಮೆಸೇಜ್ ಮೂಲಕ ಪಿಸ್ತೂಲ್ ಕೇಳಿದ್ದ. ಭಾಯ್ ಮುಝೇ ಏಕ್ ಪಿಸ್ತೂಲ್ ಚಾಹಿಯೇ ಥೀ, ಮಿಲೇಗಿ ಕ್ಯಾ ಎಂದು ಪ್ರಶ್ನಿಸಿದ್ದ ಎನ್ನಲಾಗಿದೆ. ಬಳಿಕ ಅರಬ್ ಮೂಲದ ವ್ಯಕ್ತಿ ಮೊಹಮ್ಮದ್ ಶಾಹಿಲ್ ವಾಟ್ಸಾಪ್ ನಂಬರ್ ಪಡೆದಿದ್ದ. ಜುಲೈ 14ರಿಂದ ಇಬ್ಬರ ನಡುವೆ ಹತ್ತಾರು ವಿಚಾರಗಳ ಕುರಿತು ಚರ್ಚೆಯಾಗಿದ್ದು, ಈ ವೇಳೆ ಗಲಭೆ ಎಬ್ಬಿಸಲು ರಾಣಾ ಭಾಯ್ ಎಂಬಾತ ಪ್ರಚೋದನೆ ನೀಡಿದ್ದ. ಗಲಭೆ ಎಬ್ಬಿಸಲು ಎಷ್ಟು ಬೇಕಾದರೂ ಹಣ ಕೊಡುವುದಾಗಿ ಹಾಗೂ ಶಾಹಿಲ್ ಕೇಳಿದಂತೆ ಪಿಸ್ತೂಲ್ ಕೊಡೋದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ.

ಇನ್ನೂ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಮೊಹಮ್ಮದ್ ಶಾಹಿಲ್ ವಿರುದ್ಧ ರಾಯಚೂರಿನ ಸದರ್​ಬಜಾರ್ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಲಭೆ ಎಬ್ಬಿಸಲು ಸಂಚು ರೂಪಿಸಿದ ಸಂಬಂಧ ಆರೋಪಿ ಬೇರೆ ಯಾರನ್ನಾದರೂ ಸಂಪರ್ಕಿಸಿದ್ದನಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST