LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಿಂಗಸುಗೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕರ ಸಹೋದರ ನಡುವೆ ಹೊಡೆದಾಟ

 

ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕರ ಸಹೋದರ ನಡುವೆ ವಾಗ್ವಾದ ನಡೆದು, ಬಳಿಕ ಎರಡು ಗುಂಪುಗಳ ನಡುವೆ ನೂಕಾಟ-ತಳ್ಳಾಟ ನಡೆದಿದೆ.

ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರ ಸಹೋದರ ಕರಿಯಪ್ಪ ವಜ್ಜಲ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ನಡುವೆ ಹಣದ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರೂ ಪರಸ್ಪರ ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬಳಿಕ ಬೆಂಬಲಿಗರು ಪರಸ್ಪರ ಕೈಕೈ ಮಿಲಾಯಿಸಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ನಿಮ್ಮ ಹೆಂಡತಿಯನ್ನು ಜಿ.ಪಂ ಸದಸ್ಯ ಮಾಡಲು ಹಗಲು-ರಾತ್ರಿ ಓಡಾಡಿದ್ದಾರೆ ಎಂದು ಜಿಲ್ಲಾಧ್ಯಕ್ಷರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕರಿಯಪ್ಪ ವಜ್ಜಲ್, ಯಾರೂ ಸುಮ್ಮನೆ ಮಾಡಿಲ್ಲ, ಅವರಿಗೆ ಹಣ ನೀಡಿದ್ದೇನೆ ಎಂದು ಹೇಳಿದ್ದಾರೆ. ಘಟನೆ ಲಿಂಗಸುಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಿಂಗಸುಗೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕರ ಸಹೋದರ ನಡುವೆ ಹೊಡೆದಾಟಗೌರಂಪೇಟೆ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ ಎಂಬ ವದಂತಿ..ಭೀಕರ ಅಪಘಾತ: KKRTC ರಾಯಚೂರು ಡಿಪೊ ಬಸ್ ಹರಿದು ವ್ಯಕ್ತಿ ಸಾವುಬಂಗಿಕುಂಟಾ ರಸ್ತೆಯಲ್ಲಿ ಪೂಜಾ ಸಾಮಗ್ರಿ ಅಂಗಡಿಗೆ ಬೆಂಕಿ.‌.ಸಾರಿಗೆ ಬಸ್ ಡಿಕ್ಕಿ ಚಿಕಿತ್ಸೆ ಫಲಿಸದೆ ಬೈಕ್ ಸವಾರ ಯಾಸೀನ್ ಸಾವು..ಶಾಲೆ ಹೆಡ್‌ಮಾಸ್ಟರ್‌ಗೆ ತಿರುಗಿಬಿದ್ದ ವಿದ್ಯಾರ್ಥಿ ಕಾರಿನ ಮೇಲೆ ಕಲ್ಲು ಎಸೆಯಲು ಯತ್ನಬೈಕ್‌ಗಳ ಮೇಲೆ ಹರಿದ ಸರ್ಕಾರಿ ಸಾರಿಗೆ ಬಸ್ : ಸವಾರನ ಸ್ಥಿತಿ ಗಂಭೀರ..ಜಾಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕ ಸ್ಥಳದಲ್ಲೇ ಸಾವು..ಕಪಗಲ್ ಗ್ರಾಮದಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವು..ವಿಜಯಲಕ್ಷ್ಮಿ ಲಾಡ್ಜ್ ರೆಸ್ಟೊರೆಂಟ್ ಮತ್ತು ಬಾರ್, BPL ಕಾರ್ಡ ಹೋಲ್ಡರೇ ಇದರ ಮಾಲಿಕರು..