ರಾಯಚೂರು : ತಾಲ್ಲೂಕಿನ ಗಾಣದಾಳ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅವ್ಯವಹಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಇಂದು ಗ್ರಾಮ ಪಂಚಾಯತಿಗೆ ಆಗಮಿಸಿ ದಾಖಲೆ ಪರಿಶೀಲನೆ ಮಾಡಿದ್ದಾರೆ.
2022-23 ಹಾಗೂ 2023-24ನೇ ಸಾಲಿನ ಮನರೇಗಾ, ಕರವಸೂಲಿ, 14ನೇ ಮತ್ತು 15ನೇ ಹಣಕಾಸು ಯೋಜನೆ, ಸಾಕ್ಷರತಾ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಗ್ರಾಮಸಭೆಯಲ್ಲಿ ಚರ್ಚಿಸಿ ನಿಯಮಾನುಸಾರ ನಡವಳಿ ತಯಾರಿಸದೇ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋನಾ ಸೇರಾ ಅವರು ಕೇವಲ ನರೇಗಾ ಕಡತವನ್ನು ಮಾತ್ರ ಹಾಜರುಪಡಿಸಿದ್ದಾರೆ. ಉಳಿದ ಯೋಜನೆಗಳ ಕಡತಗಳನ್ನು ಹಾಜರುಪಡಿಸದೇ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಸಂಬಂಧ 2024ರ ಡಿಸೆಂಬರ್ 10ರಂದು ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆಯನ್ನು ಇಂದಿನಿಂದ 21ರವರೆಗೆ ತನಿಖೆ ಆರಂಭವಾಗಿದೆ.
ಆಗಸ್ಟ್ 19ರಂದು ಬೆಳಿಗ್ಗೆ 11.30ಕ್ಕೆ ಗಾಣದಾಳ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಓರ್ವ ಲೋಖಾಯುಕ್ತ ಅಧಿಕಾರಿ ತನಿಖೆ ಮಾಡುತ್ತಿದ್ದಯ, ಹಿಂದಿನ ಪಿಡಿಓ ಸೋನಾಶೇರ್ ಮತ್ತು ಪ್ರಸ್ತುತ ಪಿಡಿಒ ತಾಯಪ್ಪ ನಾಯಕ್, ಸಿಬ್ಬಂದಿಗಳು ಸೇರಿದಂತೆ ದೂರುದಾರ ಪ್ರಾಣೇಶ ಅವರನ್ನು ಮೊದಲ ವಿಚಾರಣೆ ನಡೆದಿದರು.
ಈ ವೇಳೆ ತನಿಖೆಯಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳು ಯಾವುದೇ ದಾಖಲೆ ತೋರಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಎರಡು ದಿನಗಳ ಕಾಲ ಈ ಒಂದು ತನಿಖೆ ನಡೆಯಲಿದೆ.