https://youtu.be/XjcqH1r47bQ?si=K9m0RNNp32mAdxZ3
K2kannadanews.in
Local News ಕೊಪ್ಪಳ : ಜನವಸತಿ ಪ್ರದೇಶದಲ್ಲಿ ಎರಡು ನಾಗರ ಹಾವುಗಳು ಮಿಲನ ಆಗುವ ದೃಶ್ಯ ಜನರ ಕಣ್ಣಿಗೆ ಬಿದ್ದಿದ್ದು, ಅಪರೂಪದ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದ ಘಟನೆ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆಸಿದ್ದು, ಜನ ವಸತಿ ಪ್ರದೇಶದ ಬಳಿ ಇರೋ ಜಮೀನುಗಳಲ್ಲಿ ಹಾವುಗಳ ಮಿಲನ ದೃಶ್ಯ ಕಂಡುಬಂದಿದೆ. ಹಾವುಗಳು ಬರೋಬ್ಬರಿ ಒಂದು ಗಂಟೆ ಕಾಲ ಹಾವುಗಳ ಮಿಲನ ಕ್ರಿಯೆಯಲ್ಲಿ ತೊಡಗಿದ್ದು, ಗ್ರಾಮದ ಜಮೀನುವೊಂದರಲ್ಲಿ ಹಾವುಗಳ ಮಿಲನ ದೃಶ್ಯ ಸ್ಥಳೀಯರು ಸೆರೆ ಹಿಡಿದಿದ್ದಾರೆ. ದೊಡ್ಡ ಹಾವುಗಳನ್ನು ಕಂಡು ಹೆದರಿದ ಜನ, ಅಷ್ಟೇ ಅಚ್ಚರಿಯಿಂದ ಅಪರೂಪದ ದೃಶ್ಯ ಕಣ್ತುಂಬಿಕೊಂಡರು.
https://youtu.be/_v9D48iFlkI?si=l5tFASi2CrLv0xmW