ರಾಯಚೂರು ನಗರದ ಬಸ್ ನಿಲ್ದಾಣದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಹಿಳೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ರಾಜು ಬೊಮ್ಮನಾಳ ಎಂಬಾತನ ಕಣ್ಣಿಗೆ ಪಕ್ಕದ ಹೋಟೆಲ್‌ನಿಂದ ತಂದ ಖಾರದ ಪುಡಿ ಎರಚಿದ ಮಹಿಳೆ, ಬಳಿಕ ಕಟ್ಟಿಗೆಯಿಂದ ಥಳಿಸಿದ್ದಾಳೆ ಎನ್ನಲಾಗಿದೆ. ಘಟನೆ ವೇಳೆ ಸ್ಥಳದಲ್ಲಿ ಕೆಲಕಾಲ ಗದ್ದಲ ಉಂಟಾಯಿತು. “ನನ್ನ ಮೇಲೆ ಕೇಸ್ ಮಾಡಿದರೂ ಇವನನ್ನು ಬಿಡುವುದಿಲ್ಲ” ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಘಟನೆ ಸದರಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.