ರಾಯಚೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಿಂದ ಐದು ಜನ ಕ್ರಮಿನಲ್ ಗಳನ್ನು ಗಡಿಪಾರು ಮಾಡಿ ಆದೇಶ ಮಾಡಲಾಗಿದೆ ಎಂದು ರಾಯಚೂರು ಎಸ್ಪಿ ಅರುಣಾಂಗ್ಷು ಗಿರಿ ಅವರು ಗುರುವಾರ ಮಾತನಾಡುತ್ತಾ ಹೇಳಿದರು.
ಪೊಲೀಸ್ ಇಲಾಖೆಯಿಂದ ಕೆಲವು ಕ್ರಿಮಿನಲ್ಸ್ ಗಡಿಪಾರಿಗಾಗಿ ರಾಯಚೂರು ಮತ್ತು ಲಿಂಗಸುಗೂರು ಸಹಾಯಕ ಆಯುಕ್ತರಿಗೆ ಪತ್ರ ಕಳಿಸಲಾಗಿತ್ತು. ಅವರು ಪರಿಶೀಲನೆ ಮಾಡಿ ಗಡಿಪಾರು ಆದೇಶದ ಮೇರೆಗೆ ಕಳೆದ ನಾಲ್ಕು ದಿನಗಳಲ್ಲಿ ಐದು ಜನ ಕ್ರಿಮಿನಲ್ ಗಳನ್ನು ಗಡಿಪಾರು ಮಾಡಲಾಗಿದೆ ಎಂದು ಹೇಳಿದರು.