LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೊಳ್ಳೆ ಪರದೆ ಕಡ್ಡಾಯವಾಗಿ ಬಳಸಿ, ಮಲೇರಿಯಾ ರೋಗ ಹರಡದಂತೆ ನೋಡಿಕೊಳ್ಳಿ:

ಡಾ.ಸುರೇಂದ್ರ ಬಾಬು

ರಾಯಚೂರು :  ಸೋಂಕಿಗೆ ಒಳಪಡುವ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗ ಹರಡುತ್ತದೆ. ಹಾಗಾಗಿ ಮಲಗುವಾಗ ಸೊಳ್ಳೆ ಪರದೆಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಶ ಬಾಬು ಅವರು ಹೇಳಿದರು.

ಮೇ.02ರ ಶನಿವಾರ ದಂದು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಈಚನಾಳ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಲಿಂಗಸುಗೂರು ಇವರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ಮಲೇರಿಯಾ ದಿನಾಚರಣೆ ಚಾಲನೆ ನೀಡಿ ಅವರು ಮಾತನಾಡಿದರು.

ಮಲೇರಿಯಾ ರೋಗಕ್ಕೆ ತುತ್ತಾದ ವ್ಯಕ್ತಿಗೆ ಕಚ್ಚುವ ಸೊಳ್ಳೆಗಳು, ಆರೋಗ್ಯವಂತ ಮನುಷ್ಯನಿಗೆ ಕಚ್ಚಿದಾಗ ಮಲೇರಿಯಾ ರೋಗ ಹರಡುತ್ತದೆ. ಹಾಗಾಗಿ ಜ್ವರ ಬಂದಾಗ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೀರು ಸಂಗ್ರಹ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಯಾವುದೇ ರೋಗವನ್ನು ನಿಯಂತ್ರಣಕ್ಕೆ ತರಲು ಸಾರ್ವಜನಿಕರ ಸಹಕಾರ ಅಗತ್ಯವಾಗಿರುತ್ತದೆ. ಸಾರ್ವಜನಿಕರ ಸಹಕಾರವಿಲ್ಲದೇ ಯಾವುದೇ ಕಾರ್ಯಗಳು ಪರಿಪೂರ್ಣವಾಗುವುದಿಲ್ಲ ಎಂದರು.

ಅನಾಫೀಲಿಸ್ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಮಲೇರಿಯಾವನ್ನು ಜಿಲ್ಲೆಯಲ್ಲಿ ಕಳೆದ ಒಂದು ದಶಕದಲ್ಲಿ ಸೂಕ್ತ ಚಿಕಿತ್ಸೆ, ನಿಗಾವಣೆ, ಪರಿಣಾಮಕಾರಿಯಾಗಿ ಕೀಟನಾಶಕ ಸಿಂಪರಣೆಯಿAದ ಗಣನೀಯವಾಗಿ ಕಡಿಮೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸುವ ದಿಶೆಯಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ದಶಕಗಳ ಹಿಂದೆ ಪ್ರತಿದಿನ ವರದಿಯಾಗುತ್ತಿದ್ದ ಮಲೇರಿಯಾ ಪ್ರಕರಣಗಳು ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಸಿಬ್ಬಂದಿಯರ ಪರಿಶ್ರಮದಿಂದ ಹೆಚ್ಚು ಪ್ರಕರಣಗಳು ಕಂಡು ಬರುತ್ತಿದ್ದ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೃಷ್ಣಾ ನದಿಯ ದ್ವೀಪ ಪ್ರದೇಶದ ಕೆಲವು ಹಳ್ಳಿಗಳಲ್ಲಿ ನಿರಂತರವಾಗಿ ನಿಗಾವಹಿಸಿ ನಿಯಂತ್ರಣ ಮಾಡಲಾಗಿದ್ದು, ವಲಸೆ ಜನವಸತಿ, ದೊಡ್ಡಿ, ಹಟ್ಟಿಗಳ ಜನರ ನಿಗಾವಹಿಸಿ ಜ್ವರ ಬಂದ ತಕ್ಷಣ ರಕ್ತಲೇಪನ ಹಾಗೂ ಖಚಿತ ಪಟ್ಟಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಜ್ವರ ಕಂಡುಬAದಲ್ಲಿ ನಿರ್ಲಕ್ಷ್ಯ ಮಾಡದೆ ರಕ್ತಲೇಪನ ಪರೀಕ್ಷೆ ಮಾಡಿಸಬೇಕು ಇದರಿಂದ ಮಲೇರಿಯಾ ಸೇರಿದಂತೆ ಸೋಂಕಿತ ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಹಕಾರವಾಗುವುದು ಎಂದರು.

ಜಿಲ್ಲಾ ಸರ್ವೆಕ್ಷಣಾ ಮತ್ತು ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಗಣೇಶ್ ಕೆ. ಅವರು ಮಾತನಾಡಿ, ಮನೆಯ ಸುತ್ತಲಿನ ಜಾಗಗಳಲ್ಲಿ ಶಾಶ್ವತ ನೀರು ನಿಲ್ಲುವ ಸ್ಥಳಗಳಿದ್ದರೆ, ಮಣ್ಣು ಹಾಕಿ ಮುಚ್ಚಲು, ಮಲಗುವಾಗ ಇಲಾಖೆಯಿಂದ ಒದಗಿಸಿದ ಮೆಡಿಕೆಟೆಡ್ ಸೊಳ್ಳೆಪರದೆಗಳ ಬಳಕೆ, ಬೇರೆ ಊರಿನಿಂದ ಬಂದಾಗ ಜ್ವರ ಇದ್ದರೆ ತಕ್ಷಣ ಪರೀಕ್ಷೆ, ಮಾಡಿಸಲು ತಿಳಿಸಿದರಲ್ಲದೆ ಕೀಟ ನಾಶಕ ಸಿಂಪರಣೆಗೆ ಇಲಾಖೆಯ ತಂಡ ಮನೆಗಳಿಗೆ ಬಂದಾಗ ಜನತೆ ಸಂಪೂರ್ಣ ಸಹಕಾರ ನೀಡಲು ತಿಳಿಸಿದರು.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST