This is the title of the web page
This is the title of the web page
National NewsVideo News

ನಾಯಿಗೆ ರೈಲ್ವೆಯಲ್ಲಿ ಕೆಲಸ ನೀಡಿ ಎಂದ ನೆಟ್ಟಿಗರು.?


K2kannadanews.in

Viral News : ಸಾಮಾಜಿಕ ಜಾಲತಾಣಗಳಲ್ಲಿ (Social media) ದಿನವೂ ಸಾವಿರಾರು ವೀಡಿಯೋಗಳು (video) ವೈರಲ್ ಆಗುತ್ತಿರುತ್ತವೆ. ಒಂದಕ್ಕಿಂತ ಒಂದು ವೀಡಿಯೋಗಳು ವಿಭಿನ್ನವಾಗಿದ್ದ (Different) ಇಂಟರ್‌ನೆಟ್‌ನಲ್ಲಿ ಬ್ರೌಸಿಂಗ್ (browser) ಮಾಡುವವರನ್ನು ಸೆಳೆಯುತ್ತಲೇ ಇರುತ್ತದೆ. ಅದೇ ರೀತಿ ಇಲ್ಲೊಂದು ಶ್ವಾನದ (Dog) ವೀಡಿಯೋ ವೈರಲ್ ಆಗಿದ್ದು, ವೀಡಿಯೋ ನೋಡಿದ ಜನ ಈ ಶ್ವಾನಕ್ಕೆ ಭಾರತೀಯ ರೈಲ್ವೆ ಇಲಾಖೆಯಲ್ಲಿ (IRCTC) ಕೆಲಸ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ರೈಲಿನ ಬಾಗಿಲಿನಲ್ಲಿ (Train door) ನಿಲ್ಲುತ್ತಿರುವ ಜನರನ್ನು ಶ್ವಾನವೊಂದು ರೈಲು ಚಲಿಸಲು (Running train) ಆರಂಭಿಸುತ್ತಿದ್ದಂತೆ ರೈಲಿನ ಜೊತೆ ಜೊತೆಗೆ ಓಡುತ್ತಾ ಜನ ರೈಲೊಳಗೆ ಹೋಗುವಂತೆ ಮಾಡುತ್ತಿದೆ. ಈ ವೀಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. ವೀಡಿಯೋ ನೋಡಿದ ಜನ ಈ ಶ್ವಾನಕ್ಕೆ ರೈಲಿನಲ್ಲಿ ರೈಲ್ವೆ ಪೊಲೀಸ್ ಪಡೆಯಲ್ಲಿ ಕೆಲಸ ನೀಡುವಂತೆ ಮನವಿ ಮಾಡ್ತಿದ್ದಾರೆ.

ಈ ವೀಡಿಯೋದಲ್ಲಿ ನಾಯಿಯೊಂದು ರೈಲು ಚಲಿಸಲು ನಿಧಾನವಾಗಿ ಆರಂಭಿಸುತ್ತಿದ್ದಂತೆ ರೈಲು ಹಳಿಯಲ್ಲಿ ಓಡುವಾಗ ನಾಯಿ ಪ್ಲಾಟ್‌ಫಾರ್ಮ್‌ನಲ್ಲಿ ಓಡುತ್ತಾ ರೈಲಿನ ಬಾಗಿಲಿನಲ್ಲಿ ನಿಂತವರನ್ನೆಲ್ಲಾ ಬೊಗಳಿ ಒಳ ಹೋಗುವಂತೆ ಮಾಡುತ್ತದೆ. ಜನರಿಲ್ಲದ ಬಾಗಿಲಿನತ್ತ ಕೇರ್ ಮಾಡದೇ ಮುಂದೆ ಹೋಗುವ ಶ್ವಾನ, ರೈಲಿನ ಬಾಗಿಲಿನಲ್ಲಿ ಕುಳಿತಿರುವವರನ್ನು ರೈಲಿನ ಜೊತೆ ಜೊತೆಯೇ ಓಡಿಸಿಕೊಂಡು ಹೋಗುತ್ತಿದೆ. ಈ ವೇಳೆ ನಾಯಿಯ ನೋಡಿ ಜನ ರೈಲೊಳಗೆ ಹೋದರೆ ಮತ್ತೆ ಕೆಲವರು ರೈಲಿನ ಮೆಟ್ಟಿಲಿನಿಂದ ಕಾಲು ಮೇಲೆತ್ತುತ್ತಿದ್ದಾರೆ. ರೈಲಿನ ಜೊತೆ ಜೊತೆಯೇ ಓಡುವ ಈ ಶ್ವಾನ ಎಲ್ಲಿ ಕೆಳಗೆ ಬೀಳುತ್ತದೋ ಎಂದು ಜನ ಭಯಪಟ್ಟರೇ ಶ್ವಾನ ಮಾತ್ರ ಜಾಗರೂಕ ಹೆಜ್ಜೆ ಇಡುತ್ತಾ ಜನರನ್ನ ಓಡಿಸುತ್ತದೆ. ಎಲ್ಲಿಯೂ ಶ್ವಾನ ಮಾತ್ರ ಅಯತಪ್ಪುವುದಿಲ್ಲ, ತನ್ನ ಸುರಕ್ಷತೆಯ ಜೊತೆ ಜೊತೆಗೆ ಜನರ ಸುರಕ್ಷತೆಯತ್ತ ಗಮನ ಹರಿಸುತ್ತಿದೆ ಈ ಶ್ವಾನ.


[ays_poll id=3]