
ಸಿಂಧನೂರು : ತಾಲ್ಲೂಕಿನ ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯೊಂದರ ಪ್ರಕರಣದ ಆರೋಪಿ ಗೆ ಜೀವಾವಧಿ ಶಿಕ್ಷೆ ಹಾಗೂ ರೂ.10 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ವೆಂಕಟೇಶ ತುರ್ವಿಹಾಳ ಎಂಬ ವ್ಯಕ್ತಿಯು ಹನುಮೇಶ ತುರ್ವಿಹಾಳ ಅವರ ತಂಗಿಯೊಂದಿಗೆ ಸಲುಗೆ ಬೆಳಸಿ ಮಾತನಾಡುತ್ತಿದ್ದನು. ಇದೇ ಸಿಟ್ಟನ್ನು ಇಟ್ಟುಕೊಂಡು ವೆಂಕಟೇಶನನ್ನು ಭತ್ತದ ಗದ್ದೆಯ ಬದುವಿನಲ್ಲಿ ಕೆಳಗೆ ಹಾಕಿ ತನ್ನಲ್ಲಿದ್ದ ಚೂರಿಯಿಂದ ಕುತ್ತಿಗೆಗೆ ಹಾಗೂ ಇನ್ನಿತರ ಭಾಗಗಳಿಗೆ ಚುಚ್ಚಿ ಕೊಲೆ ಮಾಡಿದ್ದನು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಪ್ರಕರಣದಲ್ಲಿ ವಾದ ವಿವಾದಗಳನ್ನು ಆಲಿಸಿ, ಸಾಕ್ಷಾಧಾರಗಳನ್ನು ಪರಾಮರ್ಶಿಸಿ ಆರೋಪಿ ಹನುಮೇಶ ತುರ್ವಿಹಾಳ್ ಗೆ ಕಲಂ 302, 404 ಐಪಿಸಿ ಅಡಿಯಲ್ಲಿ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ರೂ.10 ಸಾವಿರ ದಂಡ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದೆ ನ್ಯಾಯಾಲಯ. ಸರ್ಕಾರಿ ಅಭಿಯೋಜಕರ, ತನಿಖಾಧಿಕಾರಿಗಳ ಮತ್ತು ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]