This is the title of the web page
This is the title of the web page
Local News

ಮತದಾರರ ಋಣ ತೀರಿಸಲು ಕಾಲುವೆಯ ಮೇಲೆ ಮಲಗಿ ಶಾಸಕ, ಸಚಿವರೇ..


ಸಿಂಧನೂರು : ತುಂಗಾಭದ್ರ ಎಡದಂಡೆ ಕಾಲುವೆಯ ನೀರಿನ ರಾಜಕೀಯ ಮಾಡಿ ಗೆಲ್ಲುವ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರೆ, ಒಂದು ವಾರ ಮುಂಚಿತವಾಗಿ ರೈತರ ಹೊಲಗಳಿಗೆ ನೀರು ದೊರೆಯತಿತ್ತು. ಆದರೆ ಆ ಕೆಲಸವಾಗುತ್ತಿಲ್ಲ ಹಾಗಾಗಿ ಮತದಾರರ ಋಣ ತೀರಿಸಲು ಹಾಲಿ ಮಾಜಿ ಶಾಸಕರು, ಸಚಿವರು ಕಾಲುವೆಯ ಮೇಲೆ ನಿದ್ರಿಸಬೇಕು ಎಂದು ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಎಚ್ ಪೂಜಾರ್ ಅಸಮಾಧಾನ ವ್ಯಕ್ತಪಡಿಸಿದರು.

 

ತುಂಗಭದ್ರಾ ಜಲಾಶಯದಲ್ಲಿ 20,30 ಟಿಎಂಸಿ ನೀರು ಸಂಗ್ರಹವಾದ ತಕ್ಷಣ ಕಾಲುವೆಗೆ ನೀರು ಬಿಡುವ ಪರಂಪರೆ ಈ ಹಿಂದಿನಿಂದ ನಡೆದಿದೆ. ಕಳೆದ ವರ್ಷ ಜುಲೈ 17 ರಂದೆ ಕಾಲುವೆಗೆ ನೀರು ಬಿಡಲಾಗಿತ್ತು. ಮಳೆ ತಡವಾಗಿ ಬಂದರೂ ಕೂಡ ಕಳೆದ ವಾರವೆ ಜಲಾಶಯದಲ್ಲಿ 20 ರಿಂದ 30 ಟಿಎಂಸಿ ನೀರು ಸಂಗ್ರಹವಾಗಿದೆ. ತುಂಗಭದ್ರಾ ಜಲಾಶಯ ವ್ಯಾಪ್ತಿಯ ಎಲ್ಲಾ ರಾಜಕೀಯ ಮುಖಂಡರು ಮತ್ತು ಶಾಸಕರು, ಸಂಸದರು ಸಚಿವರು ಪ್ರಮುಖ ಹೊಣೆಗಾರರಾಗಿದ್ದಾರೆ. ಊರಿಗೆ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೋಡುವ ಗಾದೆಯಂತೆ, ಪರಸ್ಥಿತಿ ಕೈ ಮೀರಿದ ಮೇಲೆಯೆ ಎಲ್ಲರು ಕಾಲುವೆ ಮೇಲೆ ಬರುತ್ತಾರೆ.

15-20 ಲಕ್ಷ ರೈತರ ಜೀವನಕ್ಕೆ ಆಧಾರವಾದ ಕಾಲುವೆ ಕುರಿತು ಮುಂಚಿತವಾಗಿ ಪ್ಲ್ಯಾನ್ ಮಾಡಲಾಗದ ಜನ ಪ್ರತಿನಿಧಿಗಳನ್ನು ಏನೆಂದು ಕರೆಯಬೇಕು.ಡಿಸೆಂಬರ ಜನವರಿ ತಿಂಗಳಲ್ಲಿ ಕ್ರೆಸ್ಟ್ ಗೇಟ್ ಹಾಗೂ ಕಾಲುವೆಯ, ರಪೇರಿಯ ಕ್ರಿಯಾ ಯೋಜನೆ ತಯಾರಿಸಿಕೊಂಡು ಏಪ್ರಿಲ್‍ನಲ್ಲಿ ಕಾಮಗಾರಿ ಆರಂಭಿಸಿದ್ದರೆ ಈ ರೀತಿಯ ಸಮಸ್ಯೆಗಳು ತಲೆ ದೂರುತಿರಲಿದಲ್ಲ. ಫೆಬ್ರುವರಿ, ಮಾರ್ಚನಲ್ಲಿ ಟೆಂಡರ್ ನಡೆದರೂ ಜೂನ್ ಕೊನೆಯ ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಲಕ್ಷಾಂತರ ರೈತರು ಸಮಸ್ಯೆ ಅನುಭವಿಸಬೇಕಾಗಿದೆ. ಹಾಗಾಗಿ ನೀರಾವರಿ ಭಾಗದ ಎಲ್ಲಾ ಹಾಲಿ, ಮಾಜಿ ಶಾಸಕರು ಸಚಿವರು ಕನಿಷ್ಠ ಒಂದು ವಾರವಾದರೂ ಕಾಲುವೆ ಕುರಿತು ಮುನ್ನ ಜಾಗೃತಿ ವಹಿಸಬೇಕು ಮತ್ತು ರಾತ್ರಿ ಕಾಲುವೆಯ ಮೇಲೆ ನಿದ್ರಿಸಿ ಮಾಡಿ, ಆದರ್ಶ ಪ್ರದರ್ಶನ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.


[ays_poll id=3]