This is the title of the web page
This is the title of the web page
Local NewsState News

ನಿರಾವರಿ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ಶಾಸಕ ಬಸನಗೌಡ ದದ್ದಲ್


ರಾಯಚೂರು : ಕಾಲುವೆ ಪರಿಶೀಲನೆ ವೇಳೆ ಅಧಿಕಾರಿಗಳ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ರೈತರ ಕಷ್ಟಕ್ಕೆ ನೀರಾವರಿ‌ ಅಧಿಕಾರಿಗಳು ಸ್ಪಂದಿಸದ ವಿಚಾರವಾಗಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಪದಗಳಿಂದ ನಿರಾವರಿ ಅಧಿಕಾರಿಗೆ ಬೈದಿದ್ದಾರೆ. ರೈತರಿಂದ ಚಪ್ಪಲಿಯಿಂದ ಹೊಡೆಸುತ್ತೇನೆ ಎಂದು ಮಹಿಳಾ ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.

ಹೌದು ಕೆಳ ಭಾಗದ ಸಿರವಾರ ಮತ್ತು ರಾಯಚೂರು ತಾಲ್ಲೂಕಿನ TLBC ರೈತರಿಗೆ ನೀರು ಬಾರದ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಜಿಲ್ಲಾಧಿಕಾರಿ, ಎಸ್ಪಿ ಸೇರಿ ಕಾಲುವೆ ವೀಕ್ಷಣೆ ಮಾಡಿದರು. ಕೆಳ ಭಾಗದ ರೈತರಿಗೆ ನೀರೊದಗಿಸುವಲ್ಲಿ ನೀರಾವರಿ ಇಲಾಖೆ  ಅಧಿಕಾರಿಗಳ ವಿಫಲತೆ ಕಂಡುಬಂದ ಹಿನ್ನೆಲೆ, ತುಂಗಭದ್ರಾ ಎಡದಂಡೆ ಕಾಲುವೆಯ ಸಿರವಾರ ವಿಭಾಗ ಇಇ ಸತ್ಯನಾರಾಯಣ ಶೆಟ್ಟಿ ಮತ್ತು ಎಇಇ ವಿಜಯಲಕ್ಷ್ಮಿ ಪಾಟೀಲ್ ಅವರಿಗೆ ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ.

7 ಕಡೆ ಡಿಸ್ಟ್ರಿಬೂಟರ್ ಗೇಟ್ ಮುರಿದು ಹಾಕಿದ್ದರಿಂದ ರೈತರಿಗೆ ನೀರು ತಲುಪಿಲ್ಲ, ಮುಖ್ಯವಾಗಿ ಹಲವುಕಡೆ ಗೇಟ್ ಮುರಿದು ತಿಂಗಳುಗಳೇ ಕಳೆದ್ರು ದುರಸ್ಥಿ ಯಾಕೆ ಮಾಡಿಲ್ಲ ಎಂಬ ಪ್ರಶ್ನೆಗೆ, TLBC ಅಧಿಕಾರಿಗಳ ಬೇಜವಬ್ದಾರಿ ಹೇಳಿಕೆಗೆ ನೀಡಿದ್ದಾರೆ ಈ ವೇಳೆ ತಾಳ್ಮೆ ಕಳೆದುಕೊಂಡ ಶಾಸಕರು ಇಇ ಅವರಿಗೆ ತಿಕ್ಕ ಸೂ…ಮಗನೆ, ರೈತರಿಂದ ನಿಮಗೆ ಚಪ್ಪಲಿಯಿಂದ ಹೊಡೆಸುತ್ತೇನೆ ಬನ್ನಿ ನೀವು ಎಂದು ಪದ ಬಳಕೆ ಮಾಡಿ ಅಸಮಧಾನ ಹೊರಹಾಕಿದ್ದಾರೆ. ಈ ವೇಳೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಪಕ್ಕದಲ್ಲೇ ಇದ್ದರು.


[ays_poll id=3]