This is the title of the web page
This is the title of the web page
Politics NewsState News

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತಾರ ಶಾಸಕ ಮಾನಪ್ಪ ಡಿ ವಜ್ಜಲ್.. ಸಿಎಂ ಸಿದ್ದುರನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ..!


K2kannadanews.in

ರಾಯಚೂರು : ಲೋಕಸಭೆ ಚುನಾವಣೆಗಾಗಿ(MP Election) ಈಗಾಗಲೇ ಎಲ್ಲಾ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಹಾಲಿ, ಮಾಜಿ ಸಂಸದ, ಶಾಸಕರುಗಳ(MLA) ಪಕ್ಷಾಂತರ ಗಾಳಿ ತೆರೆಮರೆಯಲ್ಲಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಬಿಜೆಪಿ(BJP) ಶಾಸಕರೊಬ್ಬರು ಮುಖ್ಯಮಂತ್ರಿ(CM) ಸಿದ್ದರಾಮಯ್ಯ(siddaramayya) ಅವರನ್ನು ಹಾಡಿಹೋಗಳಿರುವ ಘಟನೆ ನಡೆದಿದೆ.

ಹೌದು ಲಿಂಗಸುಗೂರು(lingasuguru) ವಿಧಾನಸಭಾ ಕ್ಷೇತ್ರದ ಶಾಸಕ ಮಾನಪ್ಪ ಡಿ ವಜ್ಜಲ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಈಗಾಗಲೆ ಕೇಳಿಬರುತ್ತಿದೆ. ಅದು ಸತ್ಯ ಎಂಬುದಕ್ಕೆ ಬಾಗಲಕೋಟೆಯ ಸಿದ್ದರಾಮೇಶ್ವರ ಭೂಮಿ ಗುರುಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿನ ಭಾಷಣ ಸಾಕ್ಷಿಯಾಗಿದೆ. ಸಿಎಂ ಇರುವ ವೇದಿಕೆಯಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಎರಡನೇ ದೇವರಾಜ ಅರಸು(devaraju arsu) ಎಂದು ಹಾಡಿ ಹೋಗಳಿ ಅಟ್ಟಕೇರಿಸಿದರು.

2018ವರೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಡಳಿತ ಪಕ್ಷಕ್ಕಿಂತ ಹೆಚ್ಚು ಅನುದಾನ ನನ್ನ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಇಂದು ನಾನು ಮೈಕ್ ಮುಂದೆ ನಿಂತು ಮಾತನಾಡುತ್ತಿದ್ದೇನೆ ಅಂದ್ರೆ ಸಿದ್ದರಾಮಯ್ಯ ಅವರೆ ಕಾರಣ. ಅವರ ಆಶೀರ್ವಾದದಿಂದಲೇ ಇಂದು ನಾವು ಮೇಲ್ಮಟ್ಟಕ್ಕೆ ಬೆಳೆದು ನಿಂತಿದ್ದೇವೆ. ವೈಯುಕ್ತಕವಾಗಿ ನಾನು ಬೆಳೆದಿದ್ದರೆ ಅದು ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಎಂದು ಹಾಡಿಹೊಗಳಿದರು.


[ays_poll id=3]