This is the title of the web page
This is the title of the web page
Local News

ಗ್ರಾಹಕರು ಪಾವತಿಸಿದ ಲಕ್ಷಾಂತರ ರೂ ವಿದ್ಯುತ್ ಬಿಲ್ ದುರ್ಬಳಕೆ : 4 ಅಮಾನತ್ತು..


K2kannadanews.in

Four Suspended ರಾಯಚೂರು : ಜೆಸ್ಕಾಂ (Jecom) ಇಲಾಖೆಗೆ ಗ್ರಾಹಕರು ಪಾವತಿಸಿದ 22 ಲಕ್ಷ (Laks) ದುರ್ಬಳಕೆಯಾದ ವಿಚಾರಕ್ಕೆ ಸಂಬಂದಿಸಿದಂತೆ ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆ ಪ್ರಭಾರ ಲೆಕ್ಕಾಧಿಕಾರಿ ಸೇರು ಮೂವರು ಸಿಬ್ಬಂದಿಗಳನ್ನು ಅಮಾನತ್ತು ಮಾಡಿದ ಘಟನೆ ಜರುಗಿದೆ.

ಹೌದು ಯಾಪದಿನ್ನಿ, ಚಂದ್ರಬಂಡಾ ಭಾಗದ ಗ್ರಾಹಕರಿಂದ ಸಂಗ್ರಹವಾದ 22 ಲಕ್ಷ ಹಣ ದುರ್ಬಳಕೆಯಾದ ಬಗ್ಗೆ ಲೆಕ್ಕ ಪರಿಶೋಧನೆ ಸಂದರ್ಭ ಬೆಳಕಿಗೆ ಬಂದಿದೆ. ಜೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಪವನ್‌ಸಿಂಗ್‌ ಅವರು ಕಚೇರಿ ಖಾತೆಗೆ 22 ಲಕ್ಷ ಪಾವತಿಯಾದ ಬಗ್ಗೆ ಮೇಲಾಧಿಕಾರಿಗೆ ವರದಿ ನೀಡಲಾಗಿತ್ತು. ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ದಿನಗೂಲಿ ನೌಕರರೊಬ್ಬರ ಮೂಲಕ ಕಂಪ್ಯೂಟರ್‌ನಲ್ಲಿ ದಾಖಲೆ ಅಪ್‌ಲೋಡ್‌ ಮಾಡಿಸುತ್ತಿದ್ದರು.

 

ಮೂರು ವರ್ಷಗಳಿಂದ ಈ ರೀತಿಯಾಗಿ ಕೆಲಸ ಮಾಡಿರುವ ದೂರುಗಳು ಇರುವ ಹಿನ್ನೆಲೆ ಬಳ್ಳಾರಿ ವಲಯದ ಜೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಅಮಾನತು ಮಾಡಿ ಆದೇಶಿಸಿದ್ದಾರೆ. ರಾಯಚೂರು ಗ್ರಾಮೀಣ ಉಪ ವಿಭಾಗದ ಕಂದಾಯ ಶಾಖೆಯ ಪ್ರಭಾರ ಲೆಕ್ಕಾಧಿಕಾರಿ ಬಸಮ್ಮ, ಸಹಾಯಕರಾದ ಸುಧಾ, ಪರ್ವೀನಾ ಹಾಗೂ ತಾಯಪ್ಪ ಅವರನ್ನು ಅಮಾನತು ಮಾಡಲಾಗಿದ್ದು, ಈ ಕುರಿತು ತನಿಖೆಗೂ ಆದೇಶ ನೀಡಿದ್ದಾರೆ.


[ays_poll id=3]