
K2 ಕ್ರೈಂ ನ್ಯೂಸ್ : ಮುಸ್ಲಿಂ ಯುವಕರ ಜೊತೆ ಪ್ರವಾಸಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ತಡೆದು ಹಿಂದೂ ಪರ ಸಂಘಟನೆಗಳು ಹಲ್ಲೆಗೆ ಯತ್ನಿಸಿ, ಪುಂಡಾಟಿಕೆ ಮೆರೆದಿದ್ದವು. ಅಲ್ಲದೇ ಯುವತಿಯೊಬ್ಬಳ ಫೋಟೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಪಿಲ ಬಳಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಪೋಲಿಸರೇ ಮುಚ್ಚಿಟ್ಟರೂ ಅದು ಸದ್ಯ ಬಟಾಬಯಲಾಗಿದೆ. ಕೆಲ ದಿನಗಳ ಹಿಂದೆ ಮುಸ್ಲಿಂ ಯುವಕರೊಂದಿಗಿದ್ದ ಹಿಂದೂ ವಿದ್ಯಾರ್ಥಿನಿಯರಿಗೆ ಥಳಿತ ಎಂದು ವಿದ್ಯಾರ್ಥಿನಿಯ ಫೋಟೋಸ್ ವೈರಲ್ ಆಗಿದ್ದು, ಫೋಟೋಸ್ ವೈರಲ್ ಆದ ಬೆನ್ನಲ್ಲೇ ಅವಮಾನ ತಾಳಲಾರದೆ ವಿದ್ಯಾರ್ಥಿನಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕೊಪ್ಪ ಸರ್ಕಾರಿ ಪಿಯು ಕಾಲೇಜಿನಲ್ಲಿ ನಿನ್ನೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. 15 ದಿನದ ಹಿಂದೆ ನಡೆದ ಘಟನೆಯ ಫೋಟೋಸ್ ಮೂರ್ನಾಲ್ಕು ದಿನಗಳ ಹಿಂದೆ ದಿಢೀರ್ ವೈರಲ್ ಆಗಿತ್ತು. ಇದೀಗ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ ನೈತಿಕ ಪೊಲೀಸ್ ಗಿರಿ, ಪೋಟೋ ವೈರಲ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಫೋಟೋ ವೈರಲ್ ಆಗಿದ್ದ ವೇಳೆ ಪೋಲಿಸರೇ ನೈಜ ಘಟನೆಯನ್ನು ತಳ್ಳಿಹಾಕಿದ್ದರು. ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
![]() |
![]() |
![]() |
![]() |
![]() |
[ays_poll id=3]