
ರಾಯಚೂರು : ರಾಜಕೀಯ ನಿಂತು ನೀರಲ್ಲ, ಹೋಗುತ್ತಿರುತ್ತದೆ. ಸಂದರ್ಭ ಬಂದಾಗ ಕಾಂಗ್ರೆಸ್ ನ ತತ್ವ ಸಿದ್ಧಾಂತಕ್ಕೆ ಯಾರು ವಿಶ್ವಾಸ ಇಟ್ಟು ಬರುತ್ತಾರೋ ಅಂತವರಿಗೆ ಕಾಂಗ್ರೆಸ್ ನಲ್ಲಿ ಅವಕಾಶವಿದೆ ಎಂದು ಆಪರೇಷನ್ ಹಸ್ತದ ಬಗ್ಗೆ ಸುಳಿವು ಬಿಟ್ಟು ಕೊಟ್ಟ ಸಚಿವ ಎನ್.ಎಸ್. ಬೋಸರಾಜು.
ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಆಪರೇಷನ್ ಹಸ್ತದ ವಿಚಾರಕ್ಕೆ ಮಾತನಾಡಿದ ಸಚಿವರು, ಸಂದರ್ಭ ಬಂದಾಗ ಕಾಂಗ್ರೆಸ್ ನ ತತ್ವ ಸಿದ್ಧಾಂತಕ್ಕೆ ಯಾರು ವಿಶ್ವಾಸ ಇಟ್ಟು ಬರುತ್ತಾರೋ, ಅಂತವರಿಗೆ ಕಾಂಗ್ರೆಸ್ ನಲ್ಲಿ ಅವಕಾಶವಿದೆ. ಆಯಾ ಜಿಲ್ಲೆಯ ರಾಜಕೀಯ ಪರಿಸ್ಥಿತಿ ಜಿಲ್ಲೆಯ ನಾಯಕರ ಜೊತೆಗೆ ಮಾತುಕತೆ ಮಾಡಿ, ಯಾವುದೇ ತೊಂದರೆ ಇಲ್ಲದೆ ಇದ್ರೆ ಆಹ್ವಾನ ಮಾಡುತ್ತೇವೆ. ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಬರಲು ತಯಾರಿ ಆಗಿದ್ದಾರೆ. ರಾಜ್ಯ ಮಟ್ಟದ ನಾಯಕರು, ಜಿಲ್ಲಾ ಮಟ್ಟದ ನಾಯಕರು ಇರಬಹುದು. ಅನೇಕರು ನಮ್ಮ ಪಕ್ಷದ ಹೈಕಮಾಂಡ್ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ. ಒಂದು ಸಲ ಅದು ಶುರುವಾದ್ರೆ ನಡೆಯುತ್ತೆ ಯಾರನ್ನೂ ಆಹ್ವಾನಿಸುವ ಮುನ್ನ ಜಿಲ್ಲಾ ನಾಯಕರ ಜೊತೆಗೆ ಹೈಕಮಾಂಡ್ ನಾಯಕರು ಚರ್ಚೆ ಮಾಡುತ್ತಿದ್ದಾರೆ. ಜಿಲ್ಲಾ ನಾಯಕರು ಒಪ್ಪಿಗೆ ಕೊಟ್ಟರೇ ಬೇರೆ ಪಕ್ಷದವರು ಕಾಂಗ್ರೆಸ್ ಬರಬಹುದಾಗಿದೆ ಎಂದರು.
![]() |
![]() |
![]() |
![]() |
![]() |
[ays_poll id=3]