This is the title of the web page
This is the title of the web page
Crime NewsState News

ಗಾಂಜಾ ಚಾಕಲೇಟ್ ಸಾಗಿಸುತ್ತಿದ್ದವನ ಹೆಡೆಮುರಿ ಕಟ್ಟಿದ ರಾಯಚೂರು ಪೊಲೀಸರು


ರಾಯಚೂರು : ನಗರದಲ್ಲಿ ಮತ್ತೆ ಗಾಂಜಾ ಚಾಕೊಲೆಟ್ ಸುದ್ದಿ ಮುನ್ನೆಲೆಗೆ ಬಂದಿದೆ. ಪೊಲೀಸರ ಕಣ್ತಪ್ಪಿಸಿ ನಗರಕ್ಕೆ ತರಲಾಗುತ್ತಿದ್ದ ಚಾಕೊಲೆಟ್ ಅನ್ನು ನೇತಾಜಿ ಪೊಲೀಸರು ವಶಪಡಿಸಿಕೊಂಡು ವ್ಯಕ್ತಿಯನ್ನು ವಶಕ್ಕೆ ಪಡೆದಿದ ಘಟನೆ ನಡೆದಿದೆ.

ಹೌದು ಯರಗೇರಾ ರಸ್ತೆ ಮಾರ್ಗವಾಗಿ ರಾಯಚೂರಿಗೆ ಗಾಂಜಾ ಚಾಕೊಲೇಟ್ ಸಾಗಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ನೇತಾಜಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೆಕ್‍ ಪೋಸ್ಟ್ ನಲ್ಲಿ ತಪಾಸಣೆ ಮಾಡುವಾಗ ಗಾಂಜಾ ಚಾಕೊಲೇಟ್ ಸಿಕ್ಕಿವೆ.

ಅಂದಾಜು ₹5 ಸಾವಿರ ಮೌಲ್ಯದ ಒಂದು ಕೆಜಿ ಗಾಂಜಾ ಚಾಕೊಲೇಟ್ ಜಪ್ತಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]