This is the title of the web page
This is the title of the web page
Politics News

2018ರಲ್ಲಿ ಸೋತಿದ್ದು 213 ಮತಗಳಿಂದ : 2021 ರಲ್ಲಿ 30,606 ಮತಗಳಿಂದ ಗೆಲುವು


K2 ಪೊಲಿಟಿಕಲ್ ನ್ಯೂಸ್ : 2023ರ ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ, ರಾಯಚೂರು ಜಿಲ್ಲೆಯಾದ್ಯಂತ ಮತವಾರು ಲೆಕ್ಕಾಚಾರದ ಅಂಕಿಅಂಶಗಳು ಮತ್ತೆ ಮಹತ್ವ ಪಡೆದುಕೊಂಡಿವೆ. ವಿಶೇಷವಾಗಿ ಉಪಚುನಾವಣೆ ಕಂಡಿರುವ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು 2018 ಮತ್ತು 21ರ ಚುನಾವಣೆಯ ಲೆಕ್ಕಾಚಾರ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ ಮುಂಚೂಣಿಯಲ್ಲಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಬಸವನಗೌಡ ತೂರ್ವಿಹಾಳ್ ತಮ್ಮ ಎದುರಾಳಿ ಅಭ್ಯರ್ಥಿ ವಿರುದ್ಧ ಕೇವಲ 213 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಸನಗೌಡ ತುರ್ವಿಹಾಳ ಅವರು 60,387 ಮತಗಳನ್ನು ಪಡೆದರೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಬಸವನಗೌಡ ತೂರ್ವಿಹಾಳ್ ಅವರು 60,174 ಮತಗಳನ್ನು ಪಡೆದಿದ್ದರು. ಅವರು ಕೇವಲ 213 ಮತಗಳನ್ನು ಪಡೆದು ಸೋಲು ಕಂಡಿದ್ದರು.

ಆದರೆ ಬಳಿಕ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿ ಬಸನಗೌಡ ತೂರ್ವಿಹಾಳ್ ಅವರು 86,337 ಮತಗಳನ್ನು ಪಡೆದು ವಿಜಯಶಾಲಿಯಾದರೆ ಇವರು ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಪ್ರತಾಪ್ ಗೌಡ ಪಾಟೀಲ್ ಅವರು 55,731 ಮತಗಳನ್ನು ಪಡೆದು 30,606 ಮತಗಳ ಅಂತರದಿಂದ ಸೋಲು ಕಂಡಿದ್ದರು.


[ays_poll id=3]