This is the title of the web page
This is the title of the web page
Crime NewsState News

ಶಾಲಾ ಪ್ರವಾಸಕ್ಕೆ ತೆರಳಿದ್ದ ಲಿಂಗಸುಗೂರು ಬಸ್ ಅಪಘಾತ : 4 ಗಂಭೀರ ಗಾಯ..


K2kannadanews.in

Crime News : ಇತ್ತೀಚೆಗಷ್ಟೇ ದೇವದುರ್ಗದ (devadurga) ಬಳಿ ಶಾಲಾ ಪ್ರವಾಸ (school trip) ತೆರಳಿದ್ದ, ಸರಕಾರಿ ಬಸ್ (government bus) ಪಲ್ಟಿಯಾದ ಘಟನೆ ಮಾಸುವ ಮುನ್ನವೇ, ಮತ್ತೊಂದು ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿಯಾದ (school bus) ಘಟನೆ ಜರುಗಿದೆ. ಅಲ್ಲಿಪುರ ಕ್ರಾಸ್ ಬಳಿ ಪಲ್ಟಿಯಾಗಿ ಮಕ್ಕಳು ಸೇರಿ ನಾಲ್ವರು (four injured) ಗಾಯಗೊಂಡ ಘಟನೆ ನಡೆದಿದೆ.

ಹಾವೇರಿ (haveri) ಜಿಲ್ಲೆ ಸವಣೂರು (savanuru) ತಾಲೂಕಿನ ಅಲ್ಲಿಪುರ ಗ್ರಾಮದ ಬಳಿ, ಬಸ್ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು (students) ಸೇರಿ ಬಸ್ ಚಾಲಕ (bus driver) ಗಂಭೀರವಾಗಿ ಗಾಯಗೊಂಡು, 12 ಮಕ್ಕಳಿಗೆ ಸಣ್ಣಪುಟ್ಟ ಗಾಯವಾದ ಜರುಗಿದೆ. ಗಾಯಗೊಂಡ ಮಕ್ಕಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ (Hubli Kim’s hospital) ರವಾನಿಸಲಾಗಿದೆ.

ಅಪಘಾತಕ್ಕೀಡಾದ ಶಾಲಾ ಪ್ರವಾಸಿ ಬಸ್ ರಾಯಚೂರು ಜಿಲ್ಲೆಯ ಲಿಂಗಸೂಗೂರು (lingasuguru) ತಾಲೂಕಿನ ಸಜ್ಜನಗುಡ್ಡ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆಯ ಹಲವು ತಾಣಗಳಿಗೆ ಸಜ್ಜನಗುಡ್ಡದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪ್ರವಾಸ ಕೈಗೊಂಡಿದ್ದರು.

ಇಲ್ಲಿನ ಉತ್ಸವ ರಾಕ್ ಗಾರ್ಡ್ ನ್ನಿಗೆ ತೆರಳುತ್ತಿದ್ದಾಗ, ಬಸ್ ಅಚಾನಕ್ಕಾಗಿ ಉರುಳಿ ಬಿದ್ದಿದೆ. ಈ ವೇಳೆ ಬಸ್‌ನಲ್ಲಿ 53 ವಿದ್ಯಾರ್ಥಿಗಳು, 6 ಶಿಕ್ಷಕರು (teacher) ಇದ್ದರು. ಘಟನೆಯಲ್ಲಿ ಬಸ್ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ (seriously injured). ತಕ್ಷಣವೇ ಅವರನ್ನು ಹುಬ್ಬಳ್ಳಿಯ ಕಿಮ್ಸ್? ಆಸ್ಪತ್ರೆಗೆ ರವಾನಿಸಲಾಯಿತು. 12 ಮಕ್ಕಳು ಸಣ್ಣಪುಟ್ಟ ಗಾಯಗೊಂಡಿದ್ದು, ಅವರಿಗೆ ಸವಣೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಸವಣೂರು ಉಪವಿಭಾಗಧಿಕಾರಿ, ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


[ays_poll id=3]