This is the title of the web page
This is the title of the web page
Local NewsVideo News

ಮತ್ತೆ ಚಿರತೆ ಪ್ರತ್ಯಕ್ಷ : ಜನರಲ್ಲಿ ಹೆಚ್ಚಿದೆ ಆತಂಕ


ರಾಯಚೂರು : ಮಾನ್ವಿಯ ಯರಮಲದೊಡ್ಡಿ ಜಮೀನಿನಲ್ಲಿ ಚಿರತೆಯೊಂದು ಕೃಷ್ಣ ಮೃಗದ ಮೇಲೆ ದಾಳಿ ಮಾಡಿ ಕೊಂದ ಘಟನೆಯಿಂದ ಜನರಲ್ಲಿ ಆತಂಕ ಹೆಚ್ಚಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಜಾಗೃತಿ ಮೂಡಿಸುತ್ತಿಲ್ಲ ಎಂಬುದು ಸ್ಥಳೀಯರ ಸುತ್ತಮುತ್ತಲ ಗ್ರಾಮಸ್ಥರ ಅಸಮಾಧಾನವಾಗಿದೆ.

ರಾಯಚೂರು ಜಿಲ್ಲೆಯ ಮಾನ್ವಿಯ ಯರಮಲದೊಡ್ಡಿ ಪ್ರದೇಶದಲ್ಲಿ, ಚಿರತೆ ದಾಳಿ ಮಾಡಿ ಕೃಷ್ಣಮೃಗವನ್ನು ಹೊಂದಿದ್ದು ಜನರು ಭಯಪಡುತ್ತಿದ್ದಾರೆ. ಇತ್ತೀಚೆಗೆ ಬೆಳಗಿನ ಪೇಟೆಯಲ್ಲಿ ಕಳೆದ ಶನಿವಾರ ಮೇಕೆಯೊಂದನ್ನು ಕೊಂದಿತ್ತು ಈ ಘಟನೆಯಿಂದ, ಸ್ಥಳೀಯರು ತಮ್ಮ ಜಮೀನುಗಳಿಗೆ ತೆರಳಲು ಭಯ ಪಡುತ್ತಿದ್ದಾರೆ. ಕೃಷ್ಣ ಮೃಗವನ್ನು ಬೇಟೆಯಾಡಿ ಹೊತ್ತೊಯ್ಯಲಾಗದೆ, ಜಮೀನಿನಲ್ಲಿಯೇ ಬಿಟ್ಟು ಹೋಗಿರುವುದನ್ನು ಸುತ್ತಮುತ್ತಲಿನ ರೈತರು ಕಂಡು ರೈತರು ಅರಣ್ಯಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಅಗಮಿಸಿದ ಮಾನ್ವಿ ವಲಯ ಅರಣ್ಯಾಧಿಕಾರಿ ಸುರೇಶ ಅಲಮೇಲು ಭೇಟಿ ನೀಡಿ ಪರಿಸೀಲನೆ ನಡೆಸಿ, ಮೃತ ಕೃಷ್ಣ ಮೃಗವನ್ನು ತಮ್ಮ ಸುರ್ಪದಿಗೆ ಪಡೆದುಕೊಂಡು, ಸರಕಾರಿ ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದು, ಪಶು ವೈದ್ಯರು ನೀಡಿದ ವರದಿಯ ಆಧಾರದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ. ಇನ್ನೂ ಸುತ್ತಮತ್ತಲ ಗ್ರಾಮದಲ್ಲಿ ಜಾಗೃತಿ ಮೂಡಿಸಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.


[ays_poll id=3]