This is the title of the web page
This is the title of the web page
Local NewsState NewsVideo News

ಎಮ್ಮೆಕರು ಹೊತ್ತೊಯ್ದು ಕೊಂದು ಹಾಕಿದ ಚಿರತೆ : ಸ್ಥಳಿಯರಲ್ಲಿ ಹೆಚ್ಚಿದ ಆತಂಕ


K2kannadanews.in

ರಾಯಚೂರು : ಮಾನ್ವಿ‌ (manvi)ಪಟ್ಟಣದ ಹೊರವಲಯದಲ್ಲಿ ಮತ್ತೆ ಚಿರತೆ(lepared) ಪ್ರತ್ಯಕ್ಷವಾಗಿದ್ದು, ಎಮ್ಮೆ ಕರವನ್ನು(buffalo calf) ಎಳೆದ್ಯೋಯ್ದು ಕೊಂದುಹಾಕಿದ ಘಟನೆ ಜರುಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿನ ಬೆಟ್ಟದ ತುದಿಯಲ್ಲಿದ್ದ ಗುಡಿಸಲಿನ, ದನದ ಕೊಟ್ಟಿಗೆಯಲ್ಲಿದ್ದ ಎಮ್ಮೆ ಕರು ಚಿರತೆಗೆ ಬಲಿಯಾಗಿದೆ. ನಾಗಪ್ಪ (nagappa) ಎಂಬುವವರ ಎಮ್ಮೆ ಕರು. ಮಾನ್ವಿ ಪಟ್ಟಣದ ಬೆಟ್ಟದಲ್ಲಿ ಸೇರಿಕೊಂಡಿರುವ ಚಿರತೆ. ಜನವಸತಿ (inhabited) ಪ್ರದೇಶಗಳಲ್ಲಿ ಆಗಾಗ ಪ್ರತ್ಯಕ್ಷವಾಗಿ ಜನರಲ್ಲಿ ಹೆಚ್ಚಿದ ಆತಂಕ ಹೆಚ್ಚಿಸಿದೆ.

ಕಳೆದ ಎರಡು ತಿಂಗಳಿಂದ ಆಗಾಗ ಪತ್ಯಕ್ಷವಾಗುತ್ತಿರುವ ಚಿರತೆ ಕಾಟಹೆಚ್ಚಾಗಿದೆ. ಹಿಂದೆ ಕೃಷ್ಣ ಮೃಗ, ಮೇಕೆ, ಎಮ್ಮೆ ಕರು ಸೇರಿ ಸಾಕು ಪ್ರಾಣಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಮಾನ್ವಿ, ನೀರಮಾನ್ವಿ, ಕಲ್ಲೂರು ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳ ಪ್ರತ್ಯಕ್ಷ ವಾಗುತ್ತಿದೆ. ಸುಮಾರು 8 ಚಿರತೆಗಳು ಬೆಟ್ಟಗಳ ಸಾಲಿನಲ್ಲಿ ಓಡಾಡುತ್ತಿರುವ ಶಂಕೆ. ಹಿಂದೆ ಒಂದೇ ಬಾರಿಗೆ ನಾಲ್ಕು ಚಿರತೆ ಪ್ರತ್ಯಕ್ಷವಾಗಿದ್ದವು. ಇನ್ನೇಷ್ಟು ಸಾಕು ಪ್ರಾಣಿಗಳ ಬಲಿ ಬೇಕು ಅಂತ ಸಾರ್ವಜನಿಕರ ಆಕ್ರೋಶ. ಸ್ಥಳದಲ್ಲಿ ಸದ್ಯ ಒಂದು ಬೋನು ಇಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳು.


[ays_poll id=3]