This is the title of the web page
This is the title of the web page
State NewsVideo News

ತಡ ರಾತ್ರಿ, ನಡುರಸ್ತೆಯಲ್ಲೆ ಪಿಎಸ್ಐ ಗೆ ಚಳಿ ಬಿಡಿಸಿದ ಶಾಸಕಿ..?


K2kannadanews.in

ರಾಯಚೂರು : ಮರಳು ತಪಾಸಣ ಕೇಂದ್ರದ (Sand Inspection Station) ಮುಂದೆ, ತಡರಾತ್ರಿ ಅಕ್ರಮ ಮರಳು (illegal sand) ಸಾಗಾಟ ವೇಳೆ ಶಾಸಕಿ(MLA) ಕೈಯಲ್ಲಿ ರೆಡ್ಡ್ ಹ್ಯಾಂಡ್(Red hand) ಆಗಿ ಸಿಕ್ಕಿಬಿದ್ದ ಟಿಪ್ಪರ್ (tipper) ಗಳು, ಅಸಮಧಾನಗೊಂಡು ಸ್ಥಳಕ್ಕೆ ಪಿಎಸ್ಐ (PSI) ಅವರನ್ನು ಕರೆಸಿ ನಡುರಸ್ತೆಯಲ್ಲೆ ಚಳಿ ಬಿಡಿಸಿದ ಘಟನೆ ದೇವದುರ್ಗದಲ್ಲಿ ಜರುಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ (devadurga) ತಾಲೂಕಿನ ಚಿಂಚೋಡಿ ಕ್ರಾಸ್ ನಲ್ಲಿ ಘಟನೆ ಜರುಗಿದ್ದು, ಬೆಳಗಾವಿ(belagavi) ಅಧಿವೇಷನದಿಂದ ವಾಪಸ್ ಬರುತ್ತಿದ್ದ ಶಾಸಕಿ ಕರೆಮ್ಮ ಜಿ ನಾಯಕ್ (karemma nayak) ಅವರ ಕೈಯ್ಯಲ್ಲಿ ಸಿಕ್ಕಿಬಿದ್ದಾರೆ ದಂಧೆಕೋರರು. ಟಿಪ್ಪರ್ ಗಳು ಅಕ್ರಮವಾಗಿ ಮರಳು ಸಾಗಿಸುತ್ತಿದ್ದರು ಕ್ರಮ ಕೈಗೊಳ್ಳದ ತಪಾಸಣಾ ಕೇಂದ್ರ ಸಿಬ್ಬಂದಿಗಳನ್ನು ಕಂಡು ಅಸಮಧಾನಗೊಂಡಿದ್ದಾರೆ. ದೇವದುರ್ಗ ತಾಲೂಕಿನಲ್ಲಿ ಮೀತಿ ಮೀರಿದ ಅಕ್ರಮ ದಂಧೆಗಳು. ಅಕ್ರಮ ದಂಧೆಗಳಿಂದ ಬೇಸತ್ತ ದೇವದುರ್ಗ ಶಾಸಕಿ ಕರೆಯಮ್ಮ ಜಿ.ನಾಯಕ ಅಬರು, ತಕ್ಷಣ ಜಾಲಹಳ್ಳಿ PSIರನ್ನ ಸ್ಥಳಕ್ಕೆ ಕರೆಯಿಸಿ ಚಳಿ ಬಿಡಿಸಿದ್ದಾರೆ ಶಾಸಕಿ ಕರೆಯಮ್ಮ ನಾಯಕ.

ನಡು ರಸ್ತೆಯಲ್ಲಿ ರಾತ್ರಿ(late night) ಜಾಲಹಳ್ಳಿ ಪಿಎಸ್ ಐ ಸುಜಾತ ಅವರಿಗೆ ಫುಲ್ ಚಾರ್ಜ್ ಮಾಡಿದ ಶಾಸಕಿ ಕೆಂಡಾಮಂಡಲರಾಗಿದ್ದಾರೆ. ಶಾಸಕಿಯ ಪ್ರಶ್ನೆಗೆ ಉತ್ತರ ಕೊಡದೇ ಪಿಎಸ್ಐ ಸುಜಾತ ಅವರು ತಬ್ಬಿಬ್ಬಾಗಿದ್ದಾರೆ. ಅಕ್ರಮ ಮರಳು, ಮಟ್ಕಾ(matka), ಜೂಜಾಟ (escape) ಎಗ್ಗಿಲ್ಲದೆ ನಡೆದಿದೆ ಏನ್ ಮಾಡುತ್ತಾ ಇದ್ದೀರಾ. ಇಷ್ಟೆಲ್ಲ‌ ಅಕ್ರಮ ನಡೆದ್ರೂ ದಂಧೆಕೋರರಿಗೆ ಯಾಕೇ ಸಾಥ್ ಕೊಡುತ್ತಿದ್ದೀರಾ. ಕ್ಷೇತ್ರದ ಜನರು ನನ್ನ ಮೇಲೆ‌ ನಂಬಿಕೆ ಇಟ್ಟು ನನ್ನನ್ನ ಗೆಲ್ಲಿಸಿದ್ದಾರೆ‌. ಅಕ್ರಮ‌ ದಂಧೆ ಕಡಿವಾಣ ಹಾಕಬೇಕಾದ ಪೊಲೀಸರು ಯಾಕೇ ಸುಮ್ಮಿನಿದ್ದೀರಾ. ತಕ್ಷಣ ಅಕ್ರಮ ಮರಳು ದಂಧೆಕೋರರ ಮೇಲೆ ಕೇಸ್ ದಾಖಲಿಸಿ. ಟಿಪ್ಪರ್ ವಾಹನಗಳನ್ನ ಸೀಜ್ ಮಾಡುವಂತೆ ಶಾಸಕಿ ತಾಕೀತು.


[ays_poll id=3]