This is the title of the web page
This is the title of the web page
Crime NewsState News

270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಕಿಲಾಡಿ ಲೇಡಿ : 1.36 ಲಕ್ಷ ದಂಡ ಕಕ್ಕಿಸಿದ ಖಾಕಿ..


K2kannadanews.in

traffic rules broke : ಈ ಲೇಡಿ ಹೆಲ್ಮೆಟ್ (helmet) ಹಾಕಲ್ಲ. ಸಿಗ್ನಲ್​ನಲ್ಲಿ (signals) ನಿಲ್ಲಲ್ಲ. ಒನ್ ವೇ (one way) ಲೆಕ್ಕಕ್ಕೇ ಇಲ್ಲ. ಹೀಗೆ, ಒಂದಲ್ಲ, ಎರಡಲ್ಲ ಬರೋಬ್ಬರಿ 270 ಬಾರಿ ಟ್ರಾಫಿಕ್ ರೂಲ್ಸ್​ ಬ್ರೇಕ್​ (traffic rulas brack) ಮಾಡಿದ ಕಿಲಾಡಿ ಲೇಡಿಯ ದ್ವಿಚಕ್ರ (bike) ವಾಹನಕ್ಕೆ 1.36 ಲಕ್ಷ ದಂಡ (fine) ವಿಧಿಸಲಾಗಿದ್ದು, ಅದನ್ನು ವಸೂಲಿ ಮಾಡಲು ಪೊಲೀಸರು ವಾಹನದ ಮಾಲೀಕರಿಗೆ ನೋಟಿಸ್ (notice) ನೀಡಿದ್ದಾರೆ.

ಬೆಂಗಳೂರಿನ (benglore) ಈ ಮಹಿಳೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ಜಾಲಿಯಾಗಿ (jaly raid) ಸುತ್ತಾಡಿದ್ದಾರೆ. ಮಹಿಳೆಯb(women)  ಕಿಲಾಡಿತನ ಸಂಚಾರಿ ​ಪೊಲೀಸರ ಕಣ್ಣಿಗೆ ಬಿದ್ದಿದೆ. ಮಾಡಿದ ತಪ್ಪಿಗೆ ಮಹಿಳೆಯಿಂದ 1.36 ಲಕ್ಷ ದಂಡ ಕಕ್ಕಿಸಿದ್ದಾರೆ ಪೊಲೀಸರು. KA03 JE5705 ನಂಬರ್​​ನ ಆಯಕ್ಟೀವಾ ಬೈಕ್​​ (activa bike) ಮೇಲೆ ಈ ಮಹಿಳೆ ಸುತ್ತಾಡಿದ್ದಾರೆ. ಹೆಲ್ಮೆಟ್​​ ಹಾಕದೆ, ಮೊಬೈಲ್​ನಲ್ಲಿ (mobile) ಮಾತನಾಡುತ್ತಾ ಓಡಾಡಿದ್ದಾರೆ. ಅಲ್ಲದೆ, ಟ್ರಾಫಿಕ್ ಪೊಲೀಸರಿಗೆ ಯಾಮಾರಿಸಲು ಈ ಲೇಡಿ ನಂಬರ್ ಪ್ಲೇಟ್ (number plate) ಮರೆಮಾಚಿ ಸುತ್ತಾಡಿದ್ದಾರೆ.

ಬೆಂಗಳೂರಿನ ಸುಧಾಮನಗರದಲ್ಲಿ (sudham nagar) ಸಂಚಾರ ನಿಮಯ ಬ್ರೇಕ್​ ಮಾಡಿದ್ದನ್ನು ಸಾರ್ವಜನಿಕರು ಫೋಟೋ ತೆಗೆದು ಎಕ್ಸ್​ ಖಾತೆಯಲ್ಲಿ (X account) ಫೋಸ್ಟ್​ ಮಾಡಿದ್ದರು. ಸಂಚಾರಿ ಪೊಲೀಸರಿಗೆ ಟ್ಯಾಗ್ (tag to police) ಮಾಡಿ, ದಂಡ ವಸೂಲಿ ಮಾಡುವಂತೆ ಮನವಿ ಮಾಡಿದ್ದರು. ಈ ಪೋಸ್ಟ್​ ಕಂಡ ಪೊಲೀಸರು ಸಿಗ್ನಲ್​ಗಳಲ್ಲಿ ಅಳವಡಿಸಿದ್ದ ಕ್ಯಾಮೆರಾ ಪರಿಶೀಲನೆ ಮಾಡಿದ್ದಾರೆ. ಆಗ ಈ ಚಾಲಾಕಿ ಲೇಡಿಯ ನಿಜಬಣ್ಣ ಬಯಲಾಗಿದೆ. ಸಂಚರಿಸುವ ಈ ಮಹಿಳೆ 270 ಬಾರಿ ಸಂಚಾರಿ ನಿಯಮ ಬ್ರೇಕ್‌ ಮಾಡಿರುವುದು ಖಾಕಿ ಕಣ್ಣಿಗೆ ಬಿದ್ದಿದೆ. ನಿಯಮ ಉಲ್ಲಂಘನೆ ಮಾಡಿದ ಮಹಿಳೆಗೆ ಪೊಲೀಸರು 1,36,000 ಸಾವಿರ ದಂಡ ವಿಧಿಸಿದ್ದಾರೆ.


[ays_poll id=3]