
ರಾಯಚೂರು : ರಾಯಚೂರು ವಿಶ್ವವಿದ್ಯಾಲಯ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ, ಖರ್ಚು ಮಾಡಲಾದ ಅನುದಾನದಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಸ್ಮಾರ್ಟ್ ಕ್ಲಾಸ್ ಉಪಕರಣಗಳಿಗೆ ಸಂಬಂಧಿಸಿದಂತೆ, ಅಕ್ರಮ ನಡೆದಿದ್ದು ಈ ಕುರಿತು ಒಂದು ವಾರದಲ್ಲಿ ವರದಿ ಸಲ್ಲಿಸಲು ರಾಯಚೂರು ಜಿಲ್ಲಾಧಿಕಾರಿಗಳಿಗೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
2022-23ನೇ ಸಾಲಿನಲ್ಲಿ ಸರ್ಕಾರದ ವಿವೇಚನಾ ನಿಧಿ ಅಡಿಯಲ್ಲಿ ರಾಯಚೂರು ವಿಶ್ವವಿದ್ಯಾಲಯಕ್ಕೆ ಸ್ಮಾರ್ಟ್ ಕ್ಲಾಸ್ ರೂಮ್, ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಪೀಠೋಪಕರಣಗಳ ಖರೀದಿಗಾಗಿ 9.85 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ 7.38 ಕೋಟಿಯನ್ನು ವಿ.ವಿ. ಕುಲಸಚಿವರಿಗೆ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 2.79 ಕೋಟಿ ಅನುದಾನವನ್ನು ಬರೀ ಸಿ.ಸಿ.ಟಿ.ವಿ. ಕ್ಯಾಮೆರಾ ಹಾಗೂ ಸ್ಮಾರ್ಟ್ ಟಿ.ವಿ.ಗಳಿಗೆ ಹಾಗೂ ಇದಕ್ಕೆ ಸಂಬಂಧಿಸಿದ ಉಪಕರಣಗಳಿಗೇ ಖರ್ಚು ಮಾಡಲಾಗಿತ್ತು. ಬೆಂಗಳೂರಿನ ನಂದಿ ಎಂಟರ್‌ಪ್ರೈಸಸ್‌ನಿಂದ 2022ರ ಅಕ್ಟೋಬರ್‌ನಲ್ಲಿ ಉಪಕರಣಗಳನ್ನು ಖರೀದಿಸ
ಲಾಗಿದೆ.
ಈ ವಸ್ತುಗಳ ದರಗಳನ್ನು ಆನ್‌ಲೈನ್‌ನಲ್ಲಿ ಮಂಡಳಿಯು ಪರಿಶೀಲಿಸಿದಾಗ ನಾಲ್ಕೈದು ಪಟ್ಟು ಹೆಚ್ಚಿನ ದರಕ್ಕೆ ಖರೀದಿಸಿರುವುದು ಬೆಳಕಿಗೆ ಬಂದಿದೆ ಎಂದು ಮಂಡಳಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಖರೀದಿ ಮಾಡಿದ ಉಪಕರಣ ಪರಿಶೀಲಿಸಿ ವರದಿ ನೀಡಲು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ಎಲ್. ನಾಯಕ ನೇತೃತ್ವದಲ್ಲಿ ತಂಡವನ್ನು ಕೆಕೆಆರ್‌ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ್ ಅವರು ರಚಿಸಿದ್ದಾರೆ. ತಂಡದಲ್ಲಿ ಮಂಡಳಿಯ ಹಣಕಾಸು ನಿಯಂತ್ರಕ ಸಂತೋಷ್, ಆಂತರಿಕ ಲೆಕ್ಕ ಪರಿಶೋಧಕ ಶೇಖರ್ ಪಟೇಲ್ ಹಾಗೂ ಜಿಲ್ಲಾಧಿಕಾರಿ ನಾಮನಿರ್ದೇಶಿತ ತಾಂತ್ರಿಕ ಅಧಿಕಾರಿ ಇದ್ದಾರೆ.
![]() |
![]() |
![]() |
![]() |
![]() |
[ays_poll id=3]