
K2 ನ್ಯೂಸ್ ಡೆಸ್ಕ್ : ಇಡಾಲಿಯಾ ಚಂಡಮಾರುತವು 100 ಎಂಪಿಎಚ್ (155 ಕಿಮೀ) ವೇಗವಾಗಿ ಫ್ಲೋರಿಡಾದ ಗಲ್ಫ್ ಕರಾವಳಿಯ ಕಡೆಗೆ ನುಗ್ಗಿದೆ. ಫ್ಲೋರಿಡಾ ಪ್ಯಾನ್‌ಹ್ಯಾಂಡಲ್ ಪರ್ಯಾಯ ದ್ವೀಪಕ್ಕೆ ವಕ್ರವಾಗಿ ಚಲಿಸಲಿದೆ. ಮತ್ತು ಬುಧವಾರ ದಕ್ಷಿಣ ಜಾರ್ಜಿಯಾಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ.
ಚಂಡಮಾರುತದಿಂದ ಅಮೆರಿಕಾದಲ್ಲಿ ತುರ್ತು ಪರಿಸ್ಥಿತಿ ಇಡಾಲಿಯಾ ಚಂಡಮಾರುತ ಅಮೆರಿಕದಲ್ಲಿ ಭಾರೀ ಹಾನಿ ಸೃಷ್ಟಿಸಿದ್ದು 4 ರಾಜ್ಯಗಳ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಫ್ಲೋರಿಡಾ, ಜಾರ್ಜಿಯಾ, ಉತ್ತರ ಕೆರೊಲಿನಾ &ದಕ್ಷಿಣ ಕೆರೊಲಿನಾದಲ್ಲಿ ಗಂಟೆಗೆ 200ಕಿಮೀ ವೇಗದಲ್ಲಿ ಗಾಳಿ ಬೀಸಿದೆ.
ಚಂಡಮಾರುತದ ಹಿನ್ನೆಲೆ ಎಲ್ಲ ನಾಲ್ಕು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದ್ದು 900 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಜಾರ್ಜಿಯಾ ಮತ್ತು ಫ್ಲೋರಿಡಾದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು 4.5 ಲಕ್ಷ ಜನರು ಕತ್ತಲೆಯಲ್ಲಿದ್ದಾರೆ ಎಂದು ವರದಿಯಾಗಿದೆ.
![]() |
![]() |
![]() |
![]() |
![]() |
[ays_poll id=3]