This is the title of the web page
This is the title of the web page
Feature ArticleVideo News

ನಿಷ್ಕಲ್ಮಶ ಸ್ನೇಹ, ಪ್ರೀತಿ, ಮಾನವೀಯತೆ ಅಂದ್ರೆ ಇದು..?


K2kannadanews.in

Viral video : ತಾಂತ್ರಿಕ ಯುಗದಲ್ಲಿ ಮನುಷ್ಯ ಮಾನವೀಯತೆಯನ್ನೇ ಮರೆತಿದ್ದಾನೆ. ಅಪರಿಚಿತರು ಬಿಡಿ, ಕಷ್ಟದ ಕಾಲದಲ್ಲಿ ಇರುವ ತಮ್ಮ ಆಪ್ತರ ಸಹಾಯಕ್ಕೂ ಹೋಗದ ಅದೆಷ್ಟೋ ಜನರಿದ್ದಾರೆ. ಆದರೆ ಪ್ರಾಣಿ, ಪಕ್ಷಿಗಳಲ್ಲಿ ಮಾತ್ರ ನಿಷ್ಕಲ್ಮಶ ಸ್ನೇಹ, ಪ್ರೀತಿ, ಮಾನವೀಯತೆ ಇಂದಿಗೂ ಜೀವಂತವಾಗಿದೆ. ಇದು ಮಾನವರಿಗೂ ನಿದರ್ಶನದಂತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ಭಾವನಾತ್ಮಕ, ಹಾಸ್ಯಮಯ ವಿಡಿಯೋಗಳು ಒಂದಲ್ಲ ಒಂದು ವೀಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಅದೇ ರೀತಿಯ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ, ಪುಟ್ಟ ಅಳಿಲೊಂದು ವಿಷಕಾರಿ ಹಾವಿನೊಂದಿಗೆ ಹೋರಾಡಿ ತನ್ನ ಗೆಳೆಯನ ಪ್ರಾಣವನ್ನು ರಕ್ಷಿಸಿದೆ. ಈ ನಿಷ್ಕಲ್ಮಶ ಸ್ನೇಹ ನೆಟ್ಟಿಗರ ಮನ ಗೆದ್ದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ  ವಿಡಿಯೋದಲ್ಲಿ ವಿಷಕಾರಿ ಹಾವೊಂದು ಪುಟ್ಟ ಅಳಿಲನ್ನು ಬೇಟೆಯಾಡಲು ಮುಂದಾಗುತ್ತದೆ. ಅಷ್ಟರಲ್ಲಿ ತನ್ನ ಆಪ್ತ ಪ್ರಾಣಾಪಾಯದಲ್ಲಿ ಇದ್ದಾನೆ ಎಂದು ತಿಳಿದ ಇನ್ನೊಂದು ಅಳಿಲು, ಹಾವಿನ ಬಳಿ ಬಂದು ತನ್ನ ಪ್ರಾಣವನ್ನೂ ಲೆಕ್ಕಿಸದೆ, ವಿಷಕಾರಿ ಹಾವಿನೊಂದಿಗೆ ಹೋರಾಡಿ ಗೆಳೆಯನ ಪ್ರಾಣವನ್ನು ರಕ್ಷಿಸುವಂತಹ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.


[ays_poll id=3]