This is the title of the web page
This is the title of the web page
Local News

K2 ಕನ್ನಡ ನ್ಯೂಸ್ ವರದಿಂದ ಎಚ್ಚರ ನಗರಸಭೆ ಅಧಿಕಾರಿಗಳು ಕ್ರಮ


ರಾಯಚೂರು : ವಾರ್ಡ್ ನಂಬರ್ 21ರಲ್ಲಿ ಅನಧಿಕೃತವಾಗಿ ಹಾಡು ಹಗಲೇ ನಗರಸಭೆಯಿಂದ ಯಾವುದೇ ಪರವಾನಿಗೆ ಪಡೆಯದೆ, ರೈಸಿಂಗ್ ಪೈಪ್ ನಿಂದ ಕಲೆಕ್ಷನ್ ತೆಗೆದುಕೊಳ್ಳುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಸುದ್ದಿ ಇಂದು ಬೆಳಗ್ಗೆ K2 ಕನ್ನಡ ನ್ಯೂಸ್ ನಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ರಾಯಚೂರು ನಗರದ ವಾರ್ಡ್ ನಂಬರ್ 21ರ ಬೋಳಮಾನ ದೊಡ್ಡಿ ರಸ್ತೆಯಲ್ಲಿ ಇರುವ ಆಶೀರ್ವಾದ ಬಡಾವಣೆಯಲ್ಲಿ ಅಕ್ರಮವಾಗಿ ಪರವಾನಿಗೆ ಇಲ್ಲದೆ ನೀರಿನ ಸಂಪರ್ಕ ಪ್ರಭಾವಿ ವ್ಯಕ್ತಿಯೊಬ್ಬರು ಪಡೆಯುತ್ತಿದ್ದರು ನಗರಸಭೆ ಸದಸ್ಯ ಮತ್ತು ಅಧಿಕಾರಿಗಳು ಮೌನವಾಗಿದ್ದರು. ಈ ವಿಚಾರವಾಗಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಒಂದು ಸುದ್ದಿ K2 ಕನ್ನಡ ನ್ಯೂಸ್ ಬಿತ್ತರಿಸಿ ಪೌರಾಯುಕ್ತರ ಗಮನಕ್ಕೆ ತರಲಾಗಿತ್ತು.

K2 ಕನ್ನಡ ನ್ಯೂಸ್ ವರದಿಂದ ಎಚ್ಚೆತ್ತ ಪೌರಾಯುಕ್ತರು ನಗರಸಭೆ ಅಧಿಕಾರಿಗಳಿಗೆ ಆದೇಶ ಮಾಡಿ, ಅನಧಿಕೃತವಾಗಿ ನಳದ ಸಂಪರ್ಕ ಪಡೆಯುತ್ತಿದ್ದ ಸ್ಥಳಕ್ಕೆ ಸಿಬ್ಬಂದಿಗಳನ್ನು ಕಳುಹಿಸಿ, ಅಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಪೈಪ್ ಗಳನ್ನ ವಶಕ್ಕೆ ಪಡೆದು ಕುಣಿಯನ್ನ ಮುಚ್ಚುವ ಮೂಲಕ ಕ್ರಮ ಕೈಗೊಂಡಿದ್ದಾರೆ.


[ays_poll id=3]