This is the title of the web page
This is the title of the web page
Local NewsState News

ಕಾನೂನು ಬಾಹೀರವಾಗಿ ಆಶ್ರಯ ಮನೆ ಲಪಟಾಯಿಸಿಕೊಂಡ ಗ್ರಾ.ಪಂ ಸದಸ್ಯರು..?


K2kannadanews.in

Ashraya Mane ರಾಯಚೂರು : ಈ ಒಂದು ಗ್ರಾಮ ಪಂಚಾಯಿತಿಯಲ್ಲಿ (Grama pnchayat) ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಫಲಾನುಭವಿಗಳಿಗೆ ನೀಡಬೇಕಾದ ಆಶ್ರಯ ಮನೆಯನ್ನು (Ashraya yojane) ತಮ್ಮ ಹೆಸರಿಗೆ ಮಾಡಿಕೊಂಡು ಕಾನೂನು ಗಾಳಿಗೆ ತೂರಿದಿದ್ದಾರೆ. ಅಧಿಕಾರ ದುರುಪಯೋಗ (abuse) ಪಡಿಸಿಕೊಂಡ ಸದಸ್ಯರ ಸದಸ್ಯತ್ವ ರದ್ದುಪಡಿಸಿ ಸೂಕ್ತ ಕಾನೂನು ಕ್ರಮಕ್ಕೆ (legal action) ಒತ್ತಾಯಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಲಾಗಿದೆ.

ರಾಯಚೂರು (Raichur) ತಾಲ್ಲೂಕಿನ ಗಾಣದಾಳ ಗ್ರಾಮ ಪಂಚಾಯತಿಯಲ್ಲಿ ಈ ಒಂದು ಅಕ್ರಮ (illegal) ನಡೆದಿದೆ. ಗ್ರಾಮ ಪಂಚಾಯತಿ ಸದಸ್ಯರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಗ್ರಾಮ ಪಂಚಾಯತಿ ಫಲಾನುಭವಿಗಳಿಗೆ (beneficiaries) ಬಂದ ಮನೆಗಳನ್ನು ತಾವೇ ತಮ್ಮ ಹೆಸರಿಗೆ ಮಾಡಿಕೊಂಡಿರುವ ಬಗ್ಗೆ ದೂರು ನೀಡಲಾಗಿದೆ. ಸರಕಾರ ರಾಜ್ಯದ ಬಡಜನರಿಗೆ ಮೂಲಭೂತ ಸೌಕರ್ಯದ ಅಡಿಯಲ್ಲಿ ಆಶ್ರಯ ಮನೆಗಳನ್ನು ಮಂಜೂರು ಮಾಡಿದರೆ, ಗಾಣದಾಳ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅಕ್ರಮದಲ್ಲಿ ಬಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಗ್ರಾ.ಪಂ ಸದಸ್ಯರಾದ ಜ್ಞಾನಮ್ಮ (ಫಲಾನುಭವಿ ಸಂ: KN155696221), ಜಯಶ್ರೀ (ಫಲಾನುಭವಿ ಸಂ: KN439665), ಕೆ.ಲಕ್ಷ್ಮೀ ಗಂಡ ಅಂಜಿನಯ್ಯ (ಫಲಾನುಭವಿ ಸಂ: 736060), ಆಶ್ರಯ ಮನೆಗಳನ್ನು ಪಡೆದಿದ್ದಾರೆ. ಫಲಾನುಭವಿಗಳಿಗೆ ಯಾವುದೇ ವಿಷಯ ತಿಳಿಸದೇ ಗುಪ್ತವಾಗಿ ತಾವೇ ಸರಕಾರ ನೀಡಿರುವ ಅನುದಾನದ ಆಶ್ರಯ ಮನೆಗಳನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ತಕ್ಷಣವೇ ಎಚ್ಚೆತ್ತು ಗಾಣದಾಳ ಗ್ರಾಮ ಪಂಚಾಯತಿ ಸದಸ್ಯರುಗಳು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಸದಸ್ಯರುಗಳ ಮೇಲೆ ಕ್ರಮ ಕೈಗೊಂಡು ಅವರ ಸದಸ್ಯತ್ವ ರದ್ದುಪಡಿಸಿ (Cancel membership), ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಲಾಗಿದೆ.


[ays_poll id=3]