This is the title of the web page
This is the title of the web page
Local NewsVideo News

ನಾಳೆ ICC ಸಭೆ ನಡೆದರೆ ಸಚಿವರ ಕಚೇರಿ ಮುತ್ತಿಗೆ ಎಚ್ಚರಿಕೆ..


ರಾಯಚೂರು : ತುಂಗಭದ್ರಾ ಜಲಾಶಯದ ನೀರನ್ನ ಕಾರ್ಖಾನೆಗಳಿಗೆ ಅಕ್ರಮವಾಗಿ ಮಾರಾಟ ಮಾಡಿಕೊಂಡ, ಆ ಬಗ್ಗೆ ದಾರಿ ತಪ್ಪಿಸುವ ನಿಟ್ಟಿನಲ್ಲಿ, ಸಚಿವರು ನೀರಾವರಿ ಸಲಹಾ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ತುರ್ತಾಗಿ ಕರೆದಿದ್ದು ಖಂಡನೀಯ. ಒಂದು ವೇಳೆ ಸಭೆ ನಡೆದಿದ್ದೆ ಆದಲ್ಲಿ ಸಚಿವರ ಕಛೇರಿಗೆ ರೈತ, ಜನ, ಜಾನುವಾರುಗಳ ಮೂಲಕ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ್ ಚಾಗಬಾವಿ ನೀಡಿದ್ದಾರೆ.

ಬಳ್ಳಾರಿ, ವಿಜಯನಗರ, ಕೊಪ್ಪಳ ರಾಯಚೂರು ಭಾಗದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ, ಕಳೆದ ಒಂದು ತಿಂಗಳನಿಂದ ಅಕ್ರಮವಾಗಿ ಕಲ್ಯಾಣಿ ಮತ್ತು ಕಿರ್ಲೋಸ್ಕರ್ ಸೇರಿದಂತೆ ವಿವಿಧ ಖಾಸಗಿ ಸ್ಟೀಲ್ ಕಂಪನಿ ಗಳಿಗೆ ನೀರು ಹರಿಸಲಾಗಿದೆ. ಒಂದು ವೇಳೆ ಐಸಿಸಿ ಸಭೆಯನ್ನ ಮುನಿರಾಬಾದ್ ಕಾಡ ಕಚೇರಿಯಲ್ಲಿ ನಡೆಸಿದರೆ ರೈತರು ವಿರೋಧಿಸುತ್ತಾರೆ, ಎಂದು ಸಚಿವ ಆನಂದ್ ಸಿಂಗ್ ಅವರು ತುರ್ತಾಗಿ ವಿಧಾನಸೌಧದಲ್ಲಿ ಸಭೆಯನ್ನು ಕರೆದಿದ್ದಾರೆ. ಕೂಡಲೇ ಸಚಿವರು ಈ ಒಂದು ಸಭೆಯನ್ನು ರದ್ದು ಮಾಡಬೇಕು ಕೊಪ್ಪಳ ಅಥವಾ ರಾಯಚೂರಿನಲ್ಲಿ ಈ ಒಂದು ಸಭೆಯನ್ನ ನಡೆಸಬೇಕು ಇಲ್ಲದಿದ್ದರೆ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

ಅಮರೇಶ ಚಾಗಬಾವಿ..ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ..


[ays_poll id=3]