This is the title of the web page
This is the title of the web page
Local News

ಹಾಸ್ಟೆಲ್ ವಾರ್ಡನ್ ಗುಂಡಾವರ್ತನೆ ಅಮಾನತ್ತಿಗೆ ಒತ್ತಾಯ


ಸಿಂಧನೂರು : ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿ ನಿಲಯದ ಕಾರ್ಮಿಕರಿಗೆ ಮಾನಸಿಕ ಕಿರುಕುಳ ನೀಡಿ ಕಾರ್ಮಿಕರ ಮೇಲೆ ಗುಂಡಾವರ್ತನೆ ಮೆರೆಯುತ್ತಿರುವ ವಾರ್ಡನ್ ರವಿಚಂದ್ರನರನ್ನು ಅಮಾನತ್ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕ ಸಂಘ-ಟಿಯುಸಿಐ ತಾಲೂಕು ಸಮಿತಿ ಅಧ್ಯಕ್ಷ ಎನ್ ಗಂಗಾಧರ್ ಆಗ್ರಹಿಸಿದರು.

ರಾಯಚೂರು ಜಿಲ್ಲೆಯ ಸಿಂಧನೂರು ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಕಾರ್ಮಿಕರ ಬಾಕಿ ವೇತನ ಪಾವತಿಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಕಾರ್ಮಿಕರ ಬಾಕಿ ವೇತನ ಪಾವತಿಸಿರುವುದಿಲ್ಲ. ಈ ಬಗ್ಗೆ ಸಿಂಧನೂರು ತಹಶೀಲ್ದಾರರ ಕಛೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ಹೋರಾಟವನ್ನು ಹಮ್ಮಿಕೊಂಡಾಗ, ಕಾರ್ಮಿಕರೇಲ್ಲರೂ ತಮ್ಮ ಬಾಕಿ ವೇತನ ಪಾವತಿಗಾಗಿ ಹೋರಾಟಕ್ಕೆ ಆಗಮಿಸಿದಾಗ, ಸದರಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರಿ ಸುಮಾರು 3 ವಸತಿ ನಿಲಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ, ಸಿಂಧನೂರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ, ರವಿಚಂದ್ರ ಇವರು ನಮ್ಮ ವಸತಿ ನಿಲಯದ ಕಾರ್ಮಿಕರಾದ ವಿರೇಶ ಎಂಬುವವರಿಗೆ ದೂರವಾಣಿ ಕರೆ ಮಾಡಿ, ಕಾರ್ಮಿಕರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಮಾಡುತ್ತಿರುವ ಕೆಲಸವನ್ನು ತುಚ್ಚವಾಗಿ ಕಂಡು, ನೀವು ಯಾವ ರೀತಿ ಸ್ಟೈಕ್ ಮಾಡಿ ಎಂಗ ಪಗಾರ ತಗಂತೀರಿ ನೋಡೋಣ ಎಂದು ಬೆದರಿಕೆ ಹಾಕಿ ಗುಂಡಾವರ್ತನೆಯನ್ನು ಮೆರಿದಿದ್ದಾನೆ.

ಸದರಿ ರವಿಚಂದ್ರ ಎಂಬ ವಾರ್ಡನ್ ಸಿಂಧನೂರು ಸೇರಿದಂತೆ ಮಸ್ಕಿ ತಾಲೂಕಿನ 3-4 ವಸತಿ ನಿಲಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ಎಲ್ಲಾ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸಮರ್ಪಕವಾದ ಊಟ-ಉಪಹಾರ ನೀಡದೆ, ಹಾಗೆಯೇ ಹಣದ ಮದದಿಂದ ವಸತಿ ನಿಲಯಗಳ ಕಾರ್ಮಿಕರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವುದು, ನಿಂದಿಸುವುದು, ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿರುವ ಈತನನ್ನು ಶಾಶ್ವತವಾಗಿ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.


[ays_poll id=3]