This is the title of the web page
This is the title of the web page
Local News

ಪ್ರಸಿದ್ಧ ಐತಿಹಾಸಿಕ ಶ್ರೀ ಅಮರೇಶ್ವರ ಜಾತ್ರೆ : ಮಹಾರಥೋತ್ಸವ..


K2kannadanews.in

Amareshwar fair ಲಿಂಗಸುಗೂರು :  ಐತಿಹಾಸಿಕ ಶ್ರೀ ಅಮರೇಶ್ವರ ಜಾತ್ರಾ ಹಾಗು ಮಹಾರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು. ಮಾರ್ಚ 25ರಂದು ಜರುಗಲಿರುವ ಮಹಾ ರಥೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಸುಕ್ಷೇತ್ರ ಶ್ರೀ ಅಮರೇಶ್ವರ ಜಾತ್ರೆಯು ಕಲ್ಯಾಣ ಕರ್ನಾಟಕ (kalyan karnatak) ಭಾಗದಲ್ಲಿ ನಡೆಯುವ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದೆ. ಮಾ.23 ರಂದು ದೇವರ ಪ್ರಥಮ ಉತ್ಸವ ಹಾಗೂ ಗುರುಗಳು ಪಲ್ಲಕ್ಕಿ ಸಮೇತ ಗುರುಗುಂಟಾ ಸಂಸ್ಥಾನಕ್ಕೆ ತೆರಳಿ ದರ್ಬಾರ್‌ ರಾಜಬೀದಿಯಲ್ಲಿ ದೇವರ ಕಳಸ ಮೆರವಣಿಗೆ, ಪುರವಂತಿಕೆ ಸೇವೆಗಳು ನಡೆಯುವುದು.

ಮಾ.24ರಂದು ಗುರುಗುಂಟಾ ಸಂಸ್ಥಾನದಿಂದ ಅಮರೇಶ್ವರ ಕ್ಷೇತ್ರಕ್ಕೆ ಗುರುಗುಳ ಕಳಸ ಪಲ್ಲಕ್ಕಿಯೊಂದಿಗೆ ಆಗಮಿಸಿ, ಸಂಜೆ ದೇವರ ದ್ವಿತೀಯ ಉತ್ಸವ, ಗುರುಗಳ ಕಳಸ, ಉತ್ಸವಮೂರ್ತಿ, ಗುಂತಗೋಳ ಸಂಸ್ಥಾನಕ್ಕೆ ತೆರಳಿ ನಂತರ ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ, ವಿಶೇಷ ಪೂಜೆ ನಡೆಸಲಾಗುತ್ತದೆ. ನಂತರ ರಾತ್ರಿ ಗುಂತಗೊಳ ಸಂಸ್ಥಾನದ ದರ್ಬಾರ್ ಮುಂಭಾಗದ ಅಮರೇಶ್ವರ ಕಟ್ಟಿಯಲ್ಲಿ ಸಂಸ್ಥಾನಿಕರಿಂದ ಪೂಜೆ ಜರುಗುವುದು. ಮಾ. 25ರಂದು ಹೋಳಿ ಹುಣ್ಣಿಮೆ ದಿನದಂದು ಗುಂತಗೊಳದಿಂದ ದೇವಾಲಯಕ್ಕೆ ಗುರುಗಳು, ಕಳಸ ಉತ್ಸವ ಮೂರ್ತಿ ಆಗಮಿಸಿದ ನಂತರ ತೃತೀಯ ಉತ್ಸವ ಹಾಗೂ ರಥಕ್ಕೆ ಕಳಸಾರೋಹಣ ಜರುಗಿದ ನಂತರ ಸಂಜೆ 6ಕ್ಕೆ ಶ್ರೀ ಅಮರೇಶ್ವರ ದೇವರ ಮಹಾರಥೋತ್ಸವ ನಡೆಯಲಿದೆ.


[ays_poll id=3]