This is the title of the web page
This is the title of the web page
State News

ಜೀವನಪರ್ಯಂತ ಬಿಜೆಪಿ ಪಕ್ಷಕ್ಕೆ ದುಡಿದು ಈಗ ಕಾಂಗ್ರೆಸ್‌ ಗೆ ಬಂದಿದ್ದಾರೆ


ರಾಯಚೂರು : ಜಗದೀಶ್ ಶೆಟ್ಟರ್ ಜೀವನಪರ್ಯಂತ ಬಿಜೆಪಿ ಪಕ್ಷಕ್ಕೆ ದುಡಿದು, ಈಗ ಕಾಂಗ್ರೆಸ್ ಗೆ ಬಂದಿದ್ದಾರೆ. ಆದರೆ ಬಸವರಾಜ ಬೊಮ್ಮಾಯಿಯವರು ಎಷ್ಟು ಪಕ್ಷ ಬದಲಿಸಿದ್ದಾರೆ ಮೊದಲು ತಿಳಿದುಕೊಳ್ಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು. ಮಾತನಾಡುವ ಮೊದಲು ಅವರು ಎಷ್ಟು ಪಕ್ಷಗಳನ್ನ ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಅರಿತುಕೊಳ್ಳಬೇಕು. ಅವರು ಹಿರಿಯರಿದ್ದಾರೆ ಎಷ್ಟು ಪಕ್ಷಗಳಲ್ಲಿ ಹಾರಾಡಿದ್ದಾರೆ ಎಂದು ಅವರೇ ತಿಳಿದುಕೊಳ್ಳಬೇಕು. ಆ ಬಗ್ಗೆ ನಾನು ಹೇಳುವ ಅವಶ್ಯಕತೆ ಇಲ್ಲ. ಆದರೆ ಜಗದೀಶ್ ಶೆಟ್ಟರ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಪಕ್ಷಕ್ಕೆ ದುಡಿದು ಈಗ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ ಎಂದು ಹೇಳಿದರು.


[ays_poll id=3]