This is the title of the web page
This is the title of the web page
Crime NewsNational News

ಕಳ್ಳತನದಿಂದ ಚಿನ್ನ ಸಾಗಿಸೋಕೆ ಬೆರೆ ಜಾಗ ಸಿಗ್ಲಿಲ್ವಾ : ಅದೇ ಜಾಗನೇ ಬೇಕಾ..?


K2kannadanews.in

Crime News : ಇತ್ತೀಚೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 98 ಲಕ್ಷ (Laks) ಮೌಲ್ಯದ ಚಿನ್ನವನ್ನು (Gold) ವಶಕ್ಕೆ ಪಡೆದಿದ್ದ ಕಸ್ಟಮ್ಸ್ ಅಧಿಕಾರಿಗಳು, ಇದೀಗ ಇಬ್ಬರನ್ನು ಬಂಧಿಸಿ 50 ಲಕ್ಷ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mangaluru International Airport) ನಡೆದಿದೆ. ಆದ್ರೆ ಅಕ್ರಮವಾಗಿ ಚಿನ್ನ ಸಾಗಿಸೋಕೆ ಬಳಸಿದ ಜಾಗ ಮಾತ್ರ ಹುಫ್…?

ದುಬೈನಿಂದ (Dubai) ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರ (passenger) ಚಲನವಲನಗಳ ಮೇಲೆ ಅನುಮಾನ ಮೂಡಿದ ಹಿನ್ನೆಲೆ ಕಸ್ಟಮ್ಸ್ (Custom officer) ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ತಪಾಸಣೆ (Chucking) ನಡೆಸಿದ್ದಾರೆ. ಈ ವೇಳೆ ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಲಾಗಿತ್ತು. ಒಬ್ಬ ಪ್ರಯಾಣಿಕ ಚಿನ್ನದ ಪೇಸ್ಟ್ ಅನ್ನು ಕ್ಯಾಪ್ಸೂಲ್​ಗಳಲ್ಲಿ ತುಂಬಿಸಿ ಗುದದ್ವಾರದಲ್ಲಿಟ್ಟು ಸಾಗಿಸುತ್ತಿದ್ದನು. ಸದ್ಯ ಇಬ್ಬರು ಪ್ರಯಾಣಿಕರಿಂದ ಒಟ್ಟು 50.93 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


[ays_poll id=3]