This is the title of the web page
This is the title of the web page
Crime NewsNational News

Gmail ಬಳಕೆದಾರರಿಗೆ ಎಚ್ಚರ ವೈಯಕ್ತಿಕ ವಿವರ ಕದಿಯುತ್ತಾರೆ..!


K2 ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚ ತೊಡಗಿವೆ. ಸರ್ಕಾರ ಅದೆಷ್ಟೇ ಮುಂಜಾಗ್ರತೆ ವಹಿಸಿದ್ದರು, ಬಳಕೆದಾರರ ನಿರ್ಲಕ್ಷದಿಂದಾಗಿ ಸೈಬರ್ ಕಳ್ಳರು ಹೆಚ್ಚುತ್ತಿದ್ದಾರೆ. ಇದೀಗ ಸೈಬರ್ ಕಳ್ಳರ ಕಣ್ಣು Gmail ಬಳಕೆದಾರರ ಮೇಲೆ ಬಿದ್ದಿದೆ, ಜಿಮೇಲ್ ಬಳಕೆದಾರರು ಎಚ್ಚರದಿಂದಿರುವ ಅನಿವಾರ್ಯವಿದೆ.

ಹೌದು ವರದಿಯೊಂದರ ಪ್ರಕಾರ, Face Book ಸಪೋರ್ಟ್ ಟೀಮ್ ಹೆಸರಿನಲ್ಲಿ ಹ್ಯಾಕರ್‌ಗಳು, Gmail ಬಳಕೆದಾರರಿಗೆ ಮೇಲ್ ಕಳುಹಿಸುತ್ತಿದ್ದಾರೆ. ಇದರಲ್ಲಿ Face Book ಅಕೌಂಟ್ ಡಿಲೀಟ್ ಮಾಡುವ ಮೆಸೇಜ್ ಇರುತ್ತದೆ . ಸಂದೇಶವು ಫೇಸ್‌ಬುಕ್‌ನಿಂದ ಹೊಸ ಸಂದೇಶ ಎಂಬ ಹೆಸರಿನೊಂದಿಗೆ ಬರುತ್ತದೆ. ಈ ಸಂದೇಶದಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ ಚಾಟ್ ತೆರೆಯುತ್ತದೆ. ಇದರಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳಲಾಗುತ್ತದೆ. ಒಂದು ವೇಳೆ ವೈಯಕ್ತಿಕ ಮಾಹಿತಿಯನ್ನು ನೀಡಿದಲ್ಲಿ ಸಮಸ್ಯೆಗಳು ಆರಂಭವಾಗಲಿವೆ. ಹೀಗಾಗಿ ಇಂತಹ ಮೇಲ್‌ಗಳನ್ನು ತೆರೆಯಬೇಡಿ. ತೆರೆದರು ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸದಿರಿ.


[ays_poll id=3]