ಪತ್ನಿಗೆ ಫೋನ್‌ನಲ್ಲಿ ತ್ರಿಬಲ್ ತಲಾಕ್ ನೀಡಿ ಅತ್ತಿಗೆ ಜೊತೆ ಸಂಬಂಧ..! ಮತ್ತೆ ಮುನ್ನೆಲೆಗೆ ಬಂದ ತ್ರಿಪಲ್ ತಲಾಖ್ ..?

K2 ನ್ಯೂಸ್ ಡೆಸ್ಕ್ : ಹೆಂಡತಿಗೆ ತಲಾಕ್ ಮೇಲೆ ಅತ್ತಿಗೆಯೊಂದಿಗೆ ವಿವಾಹದ ಸಂಬಂಧ ಹೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಅನ್ಯಾಯ್ಯಕ್ಕೊಳಗಾದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನಗೆ ನ್ಯಾಯ ನೀಡುವಂತೆ ವಿರುದ್ಧ ದೂರು ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಈ ಘಟನೆ ನಡೆದಿದ್ದು,ಪಳನಿ ಪೊಲೀಸರಿಗೆ ದೂರು ನೀಡಿರುವ ಪತ್ನಿ, ತನ್ನ ಗಂಡ ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳವಾಡುತ್ತಾನೆ. ಅಷ್ಟೇ ಅಲ್ಲ ಫೋನ್ ಮೂಲಕ ವಿಚ್ಚೇದನ ನೀಡಿದ್ದಾನೆ. ಆತ ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧವನ್ನೂ ಹೊಂದಿದ್ದಾನೆ ಎಂದು ಆತನ ಪತ್ನಿ ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಆಕೆಯ ಪತಿ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಮಹಿಳೆ 15 ವರ್ಷಗಳ ಹಿಂದೆ ಮದುವೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಅವರಿಗೆ ಒಬ್ಬ ಮಗಳಿದ್ದಳು, ಅವಳು ಕಳೆದ ಜನವರಿಯಲ್ಲಿ ಆಕೆ ನಿಧನ ಆಗಿದ್ದಾಳೆ.
ಪತಿ ಮದ್ಯವ್ಯಸನಿ ಎಂದು ಮಹಿಳೆ ಹೇಳುತ್ತಿದ್ದು, ಈತ ತನ್ನ ಅತ್ತಿಗೆ ಹಾಗೂ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಘಟನೆಯ ನಂತರ ತಾನು ತನ್ನ ತಾಯಿಯ ಮನೆಗೆ ಹೋಗಿದ್ದೆ ಎಂದು ಮಹಿಳೆ ಹೇಳಿದ್ದು, ಆಗ ಪತಿ ಫೋನ್ ಮೂಲಕ ಮೂರು ಬಾರಿ ತಲಾಖ್-ತಲಾಖ್-ತಲಾಖ್ ಎಂದು ಹೇಳಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಳನಿ ಪೊಲೀಸ್ ಠಾಣೆಯ ನಿವಾಸಿ ಮಹಿಳೆಯೊಬ್ಬರು ತ್ರಿವಳಿ ತಲಾಖ್ ದೂರು ನೀಡಿದ್ದಾರೆ ಎಂದು ನಗರ ಡಿಎಸ್ಪಿ ಗವೇಂದ್ರ ಪಾಲ್ ಗೌತಮ್ ತಿಳಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]