This is the title of the web page
This is the title of the web page
Crime NewsState News

ಬಾಲಕರಿಂದ ಬಾಲಕಿ ಮೇಲೆ ಚಾಕು ತೋರಿಸಿ ಅತ್ಯಾಚಾರ ಮೊಬೈಲ್‌ನಲ್ಲಿ ರೆಕಾರ್ಡ್..!


K2kannadanews.in

Crime ನ್ಯೂಸ್ : ಸಾಮಾಜಿಕ ಜಾಲತಾಣಗಳ (Social Media) ಪ್ರಭಾವದಿಂದ, ಸಣ್ಣ ವಯಸ್ಸಿನಲ್ಲೇ ಕಾಡುವ ಅತಿಯಾದ ಕಾಮಾಂಧತೆಯೋ (Sexual thrust) ಗೊತ್ತಿಲ್ಲ. ಆಟವಾಡುವ ವಯಸ್ಸಿನಲ್ಲಿ ಮಕ್ಕಳು (POCSO Case) ಕೂಡಾ ಲೈಂಗಿಕ ಆಸಕ್ತಿಯನ್ನು ಬೆಳೆಸಿಕೊಂಡು ಅದನ್ನು ಪೂರೈಸಿಕೊಳ್ಳಲು ಅಪಾಯಕಾರಿ ದಾರಿಗಳನ್ನು (Dangerous ways) ದಾರಿ ಹುಡಿಕಿಕೊಳ್ಳುತ್ತಿರುವುದು ಕೆಟ್ಟ ಬೆಳವಣಿಗೆಯಾಗಿದ್ದು, ಅಂತದ್ದೇ ಘಟನೆಯೊಂದು ನಡೆದಿದೆ.

ಹೌದು ಅಪ್ರಾಪ್ತ ಬಾಲಕಿಯ (minor girl) ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರ(Rape) ಎಸಗಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. 10 ವರ್ಷದ ಬಾಲಕಿಯ ಮೇಲೆ 14 ಮತ್ತು 16 ವರ್ಷದ ಇಬ್ಬರು ಬಾಲಕರು ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಾಲಕಿಯ ಹೆತ್ತವರು ಹೊಟ್ಟೆಪಾಡಿಗಾಗಿ ಮುಂಬೈನಲ್ಲಿ ಕೆಲಸಕ್ಕೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕಿ ಸಂಬಂಧಿಕರ ಮನೆಯಲ್ಲಿದ್ದು, ಶಿಕ್ಷಣ ಕಲಿಯುತ್ತಿದ್ದಾಳೆ.

ಆದರೆ 10 ವರ್ಷದ ಬಾಲಕಿಗೆ ಇಬ್ಬರು ಬಾಲಕರು ಪುಸಲಾಯಿಸಿ ಕರೆದುಕೊಂಡು ಹೋಗಿ, ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅತ್ಯಾಚಾರ ಮಾಡಿ ಪರಸ್ಪರ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾಳಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


[ays_poll id=3]