This is the title of the web page
This is the title of the web page
Crime NewsVideo News

5ಕಡೆ ದಾಳಿ ಗಾಂಜಾ ಚಾಕ್ಲೇಟ್ ವಶ.. ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿ ದಾಳಿ..


ರಾಯಚೂರು : ರಾಯಚೂರು ನಗರದ ಸಾರ್ವಜನಿಕರ ನಿದ್ದೆಗೆಡಿಸಿದ ಗಾಂಜಾ ಚಾಕ್ಲೇಟ್, ಆಗೇದಷ್ಟು ಆಳಕ್ಕೆ ಹೋಗುತ್ತಿದೆ ಗಾಂಜಾ ಚಾಕ್ಲೇಟ್ ಮಾರಾಟಗಾರರ ಜಾಲ. ಮತ್ತೆ ಐದು ಕಡೆಗಳಲ್ಲಿ ದಾಳಿ ನಡೆಸಿ, ಗಾಂಜಾ ಚಾಕ್ಲೇಟ್ ಮತ್ತು ಕಿಂಗ್ ಪಿನ್ ಸಂದೀಪ್ ಎಂಬ ಆರೋಪಿಯನ್ನ ವಶಕ್ಕೆ ಪಡೆದುಕೊಂಡ ಅಬಕಾರಿ ಮತ್ತು ಪೊಲೀಸ್ ಇಲಾಖೆ.

ಹೌದು, ಕಳೆದ ಎರಡು ದಿನಗಳಿಂದ ರಾಯಚೂರು ನಗರದಲ್ಲಿ ಗಾಂಜಾ ಚಾಕ್ಲೆಟ್ ನದ್ದೆ ಮಾತಾಗಿದೆ. ಎಲ್ ಬಿ ಎಸ್ ನಗರ ಮತ್ತು ಇಂಡಸ್ಟ್ರಿಯಲ್ ಏರಿಯಾದಲ್ಲಿ ದಾಳಿ ನಡೆಸಿ, ಸಾಕಷ್ಟು ಪ್ರಮಾಣದ ಚಾಕಲೇಟ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಂಡ ಆರೋಪಿತರ ವಿಚಾರಣೆ ನಡೆಸಿ, ಉಳಿದ ಮಾರಾಟದ ಸ್ಥಳಗಳ ಮೇಲೆ ದಾಳಿ ಮಾಡಿ ಮತ್ತಷ್ಟು ಗಾಂಜಾ ಚಾಕ್ಲೇಟ್ ಮತ್ತು 3 ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಯಚೂರು ತಾಲೂಕಿನ ಯರಮರಸ್, ಯರಗೇರಾ, ಚಿಕ್ಕಸಗೂರು ಸೇರಿದಂತೆ ಹಲವು ಕಡೆಗಳಲ್ಲಿ ಈ ಒಂದು ಗಾಂಜಾ ಚಾಕ್ಲೇಟ್ ಗಳ ಮಾರಾಟ ಜಾಲ ಪತ್ತೆಯಾಗಿದೆ. ಅಧಿಕಾರಿಗಳು ಐದು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ಎಲ್ಲಾ ಮಾರಾಟಗಾರರಿಗೆ ಗಾಂಜಾ ಚಾಕ್ಲೇಟ್ ಸರಬರಾಜು ಮಾಡುತ್ತಿದ್ದ, ಕಿಂಗ್ ಪಿನ್ ಸಂದೀಪ್ ಎಂಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಸಂದೀಪ ನಿಗೆ ಗಾಂಜಾ ಚಾಕ್ಲೇಟ್ ಎಲ್ಲಿಂದ ಬರುತ್ತಿತ್ತು ಎಂಬ ಬಗ್ಗೆ ತನಿಖೆ ಮಾಡಬೇಕಾಗಿದೆ ಎನ್ನುತ್ತಾರೆ ಅಬಕಾರಿ ಅಧಿಕಾರಿ ಲಕ್ಷ್ಮಿ.


[ays_poll id=3]