
ರಾಯಚೂರು : ಅಪ್ರಾಪ್ತ ಮಕ್ಕಳನ್ನೇ ಟಾರ್ಗೆಟ್ ಮಾಡಿ ರಾಯಚೂರು ನಗರ ಮತ್ತು ಗ್ರಾಮಾಂತರ ಭಾಗದ ಹಲವು ಕಡೆ ಗಾಂಜಾ ಮಿಶ್ರಿತ ಚಾಕಲೇಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ, ಪೋಷಕರು ಮಕ್ಕಳು ಮನೆಯಲ್ಲಿ ಯಾವ ಚಾಕ್ಲೇಟ್ ತರುತ್ತಿದ್ದಾರೆ ತಿನ್ನುತ್ತಿದ್ದಾರೆ ಎಂಬ ಕಾಳಜಿ ವಹಿಸಬೇಕು ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ನಿಖಿಲ್ ಬಿ ಮನವಿ ಮಾಡಿದ್ದಾರೆ.
ರಾಯಚೂರಿನಲ್ಲಿ ಗಾಂಜಾ ಚಾಕಲೇಟ್ ದಂಧೆ ಪ್ರಕರಣ ಪ್ರಸ್ತುತ ಸಾಕಷ್ಟು ಸುದ್ದಿ ಮಾಡಿದ್ದು, ಮಾಧ್ಯಮದೊಂದಿಗೆ ಮಾತನಾಡಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಎರಡು ಪ್ರತ್ಯೇಕ ಕಡೆ ದಾಳಿ ಮಾಡಲಾಗಿದ್ದು, ಎರಡು ಪ್ರಕರಣ ದಾಖಲಿಸಲಾಗಿದೆ. ಇನ್ನು ಈ ಒಂದು ಚಾಕಲೇಟ್ ಗಳು ಅವುಗಳ ಪಾಕೆಟ್ ಮೇಲೆ
ಆಯುರ್ವೇದಿಕ್ ಔಷಧಿ ಅಂತ ಬರೆಯಲಾಗಿದೆ, ಜೊತೆಗೆ ಅಪ್ರಾಪ್ತ ಮಕ್ಕಳು ಇದನ್ನು ಸೇವಿಸಬಾರದು ಎಂದು ಚಾಕ್ಲೆಟ್ ಮೇಲೆ ಬರೆಯಲಾಗಿದ್ದರು, ಅಪ್ರಾಪ್ತರೇ ಹೆಚ್ಚು ಸೇವನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ ಎಂಬ ಆಶ್ಚರಿಯ ಸಂಗತಿಯನ್ನು ಹೊರ ಹಾಕಿದ್ದಾರೆ.
ಎರಡು ಕೇಸ್ ಸಂಬಂಧ 7 ಕೆಜಿ ಮೌಲ್ಯದ 1,410 ಗಾಂಜಾ ಚಾಕಲೇಟ್ ಗಳು ಜಪ್ತಿ ಮಾಡಲಾಗಿದ್ದು, ಬಿಹಾರ ಮೂಲದ ಕಿಂಗ್ ಪಿನ್ ಸಂದೀಪ್, ರಾಯಚೂರು ಮೂಲದ ವಾಜೀದ್ ಅನ್ನೋ ಕಿಂಗ್ ಪಿನ್
ಹಾಗೂ ರಾಮಕೃಷ್ಣ ಸೇರಿ ಮೂವರು ಆರೋಪಗಳ ಬಂಧಿಸಲಾಗಿದೆ. ಕಿರಾಣಿ ಅಂಗಡಿಗಳು, ಹೊಟೆಲ್ ಗಳು ಹಾಗೂ ಪಾನ್ ಶಾಪ್ ಗಳಲ್ಲಿ ದಂಧೆ ನಡೆಸಲಾಗುತ್ತಿದೆ. ಈ ಬಗ್ಗೆ ಸದರ್ ಬಜಾರ್ ಹಾಗೂ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ವಿಶೇಷ ಪೊಲೀಸ್ ತಂಡ ರಚನೆ ಮಾಡಿ, ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದರು.
![]() |
![]() |
![]() |
![]() |
![]() |
[ays_poll id=3]