
ಲಿಂಗಸುಗೂರು : ನೈಟ್ ಪ್ಯಾಂಟ್ ಲೇಸ್ ನಿಂದ ಸ್ನೇಹಿತನ ಕೊಲೆ ಘಟನೆ ನಾಗರಾಳ ಗ್ರಾಮದಲ್ಲಿ ನಡೆದಿದೆ.
ರಾಯಚೂರಿನ ಲಿಂಗಸುಗೂರು ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಕೊಂದ ಆರೋಪಿ ಪವನ್. ನಿನ್ನೆ ರಾತ್ರಿ ಕುಡಿದ ಮತ್ತಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ತಾರಕಕ್ಕೆ ಏರಿದೆ. ಈ ವೇಳೆ ಆರೋಪಿ ನೈಟ್ ಪ್ಯಾಂಟ್ ನ ಲೇಸ್ ಕುತ್ತಿಗೆಗೆ ಬಿಗಿದು ಸ್ನೇಹಿತನ ಕೊಲೆಯಾಗಿದ್ದಾನೆ. ಹುಬ್ಬಳ್ಳಿ ಮೂಲದ ಪವನ ಕುಮಾರ ಕೊಲೆ ಆರೋಪಿಯಾಗಿದ್ದು, 33 ವಷ೯ದ ರವಿಕುಮಾರ ಕೊಲೆಯಾದ ವ್ಯಕ್ತಿ.
ಕಳೆದ ರಾತ್ರಿ ಮೃತನ ಮನೆ ಟೆರಸ್ ಮೇಲೆ ಮದ್ಯಪಾನ ಮಾಡಿದ್ದ ಸ್ನೇಹಿತರು, ಈ ವೇಳೆ ಜಗಳ ಆರಂಭವಾಗಿದ್ದು, ಜಗಳ ತಾರಕಕ್ಕೇರಿ ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದ್ದಾರೆ ಪೊಲೀಸರು.
![]() |
![]() |
![]() |
![]() |
![]() |
[ays_poll id=3]