This is the title of the web page
This is the title of the web page
international News

ಸೌದಿಯಲ್ಲಿ ಮೊದಲ ಮದ್ಯದಂಗಡಿ : ಖರೀದಿಗೆ ಸಚಿವಾಲಯದಿಂದ ಕ್ಲಿಯರೆನ್ಸ್ ಬೇಕು


K2kannadanews.in

FIRST ALCOHOL STORE : ನಮ್ಮ ದೇಶದಲ್ಲಿ ಗಲ್ಲಿ ಗಲ್ಲಿಗೆ ಒಂದು ಮಧ್ಯದ ಅಂಗಡಿಗಳು (Liquor Shop) ಸಿಗುತ್ತವೆ. ಆದ್ರೆ ಸೌದಿ ಅರೇಬಿಯಾದಲ್ಲಿ ದೇಶದ ಮೊದಲ ಮಧ್ಯದ ಅಂಗಡಿ ಆರಂಭವಾಗುತ್ತಿದೆಯಂತೆ. ಇದು ಒಂದು ಮೈಲಿಗಲ್ಲಾಗಿದೆ (milestone) ಎಂದು ಹೇಳಲಾಗುತ್ತಿದೆ.

ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸುವ ಸಲುವಾಗಿ ಸೌದಿ ಅರೇಬಿಯಾದ (Saudi Arabia) ರಾಜಧಾನಿ ರಿಯಾದ್‌ನಲ್ಲಿ (Riyadh) ಮುಸ್ಲಿಮೇತರ ರಾಜತಾಂತ್ರಿಕರಿಗಾಗಿ ಮೊದಲ ಮದ್ಯದ ಅಂಗಡಿ (first alcohol store) ತೆರೆಯಲಾಗುತ್ತಿದೆ. ಇಲ್ಲಿ ಮದ್ಯ ಖರೀದಿಗಾಗಿ ಗ್ರಾಹಕರು ಮೊದಲು ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬೇಕು, ವಿದೇಶಾಂಗ ಸಚಿವಾಲಯದಿಂದ ಕ್ಲಿಯರೆನ್ಸ್ ಕೋಡ್ ಪಡೆಯಬೇಕು ಮತ್ತು ತಮ್ಮ ಖರೀದಿ ಮೇಲೆ ಮಾಸಿಕ ಕೋಟಾಗಳನ್ನು ಪಾಲಿಸಬೇಕಿದೆ.

ಇಸ್ಲಾಂ (Islam) ಧರ್ಮದಲ್ಲಿ ಮದ್ಯಪಾನಕ್ಕೆ ನಿಷೇಧವಿರುವುದರಿಂದ ಸೌದಿ ಅರೇಬಿಯಾದಲ್ಲಿ ಮದ್ಯ ಮಾರಾಟಕ್ಕೆ ಈವರೆಗೆ ಅವಕಾಶವಿರಲಿಲ್ಲ. ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸುವ ಸಲುವಾಗಿ ಇದೀಗ ಮುಸ್ಲಿಂ ದೇಶದಲ್ಲಿ ಮದ್ಯದಂಗಡಿ ತೆರೆಯಲು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ಆಡಳಿತ ಪ್ರಯತ್ನ ನಡೆಸುತ್ತಿದ್ದು, ಇದರಲ್ಲಿ ಈಗ ಇಂದೊಂದು ಮೈಲಿಗಲ್ಲಾಗಿದೆ.


[ays_poll id=3]